ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ; ಮಸ್ಕ್ ಅವರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದಿದ್ದೇಕೆ ಡೊನಾಲ್ಡ್​ ಟ್ರಂಪ್​​ | Donald Trump

Untitled design - 2025-03-12T141825.823
Published on

ವಾಷಿಂಗ್ಟನ್​ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಎಲಾನ್​ ಮಸ್ಕ್ ಅವರ ಕಂಪನಿ ಟೆಸ್ಲಾದಿಂದ ಸುಂದರವಾದ ಕೆಂಪು ಕಾರನ್ನು ಖರೀದಿಸಿದ್ದಾರೆ. ಎಲಾನ್ ಮಸ್ಕ್ ಅವರನ್ನು ಬೆಂಬಲಿಸಲು ಟೆಸ್ಲಾ ಕಾರು ಖರೀದಿಸುವುದಾಗಿ ಟ್ರಂಪ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ಇದರ ನಂತರ ಎಲಾನ್ ಮಸ್ಕ್ ಅವರ ಕಂಪನಿಯ 4-5 ವಾಹನಗಳನ್ನು ಶ್ವೇತಭವನದ ಹೊರಗೆ ನಿಲ್ಲಿಸಲಾಗಿತ್ತು. ಅದರಲ್ಲಿ ಸೈಬರ್ ಟ್ರಕ್ ಕೂಡ ಸೇರಿತ್ತು. ಇವುಗಳಲ್ಲಿ ಟ್ರಂಪ್ ಸ್ವತಃ ಕೆಂಪು ಕಾರನ್ನು ಆರಿಸಿಕೊಂಡರು.

ಸರ್ಕಾರಿ ದಕ್ಷತೆ ವಿಭಾಗದ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್ ಅವರನ್ನು ಡೊನಾಲ್ಡ್ ಟ್ರಂಪ್ ಹೊಗಳಿದರು. ಎಲಾನ್​ ಮಸ್ಕ್​​ ಒಳ್ಳೆಯ ವ್ಯಕ್ತಿ ಮತ್ತು ದೇಶಭಕ್ತ ಎಂದು ಹೇಳಿದರು. ಮಸ್ಕ್ ಮತ್ತು ಅವರ ಕಂಪನಿಯನ್ನು ಗುರಿಯಾಗಿಸಿಕೊಂಡಿರುವುದನ್ನು ನೋಡಿದಾಗ ನಾನು ಟೆಸ್ಲಾ ಕಾರು ಖರೀದಿಸಲು ನಿರ್ಧರಿಸಿದೆ. ಇದು ಸಾರ್ವಜನಿಕ ಖರೀದಿಯಾಗಿತ್ತು ಮತ್ತು ಅವರು (ಎಲಾನ್ ಮಸ್ಕ್) ಉತ್ತಮ ಕೆಲಸ ಮಾಡುತ್ತಿದ್ದಾರೆ. ಮಸ್ಕ್ ಅವರಿಗೆ ಜನರ ಗುಂಪಿನಿಂದ ಅನ್ಯಾಯವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ದೇಶಭಕ್ತನಾಗಿದ್ದಕ್ಕಾಗಿ ಮಸ್ಕ್‌ಗೆ ಶಿಕ್ಷೆಯಾಗಲು ಸಾಧ್ಯವಿಲ್ಲ ಎಂದು ಜನರು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಹಿಂಸಾತ್ಮಕ ಪ್ರತಿಭಟನೆಗಳನ್ನು ದೇಶೀಯ ಭಯೋತ್ಪಾದನೆ ಎಂದು ಪರಿಗಣಿಸಲಾಗುವುದು ಎಂದು ಟ್ರಂಪ್ ಹೇಳಿದರು. ನಾನು ಟೆಸ್ಲಾ ಕಾರು ಖರೀದಿಸಬೇಕೆಂದು ನಿರ್ಧರಿಸಿದೆ ಮತ್ತು ನಾವು ಕಾರಿನಲ್ಲಿ ಹೋದೆವು. ಇದರ ಬೆಲೆ ಸುಮಾರು $ 80,000 ಮತ್ತು ಅವರ ಸಿಬ್ಬಂದಿ ಅದನ್ನು ನಿರ್ವಹಿಸಲು ಸಾಧ್ಯವಾಗುವಂತೆ ಶ್ವೇತಭವನದಲ್ಲಿ ಬಿಡಲಾಗುತ್ತದೆ. ಇದು ಒಂದು ಸುಂದರವಾದ ಕಾರು. ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಅಲ್ಲದೆ ಎಲಾನ್​ ಮಸ್ಕ್​​​ ನನಗೆ ಕಾರು ಖರೀದಿಸುವಾಗ ರಿಯಾಯಿತಿ ನೀಡುತ್ತಿದ್ದರು ಆದರೆ ನಾನು ರಿಯಾಯಿತಿ ಬೇಡವೆಂದು ಸುಮಾರು $80,000ಗೆ ಖರೀದಿಸಿರುವುದಾಗಿ ಹೇಳಿದರು. ಒಂದು ವೇಳೆ ಹಾಗೆ ಮಾಡಿದ್ದರೆ ಅದರಿಂದ ನಾನು ಪ್ರಯೋಜನ ಪಡೆಯುತ್ತಿರುವುದಾಗಿ ಆರೋಪಿಸಲಾಗುತಿತ್ತು ಎಂದು ತಮಾಷೆ ಮಾಡಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net