

pet: ಬೀದಿ ನಾಯಿಗಳ ದಾಳಿಯ ಹೆಚ್ಚಳವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪರಿಗಣಿಸಿರುವಂತೆಯೇ, ಜರ್ಮನ್ ಶೆಫರ್ಡ್ ಡಾಗ್ ಒಂದು ಮಕ್ಕಳ ಗುಂಪಿನ ರಕ್ಷಣೆಗೆ ಬರುತ್ತಿರುವುದನ್ನು ತೋರಿಸುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಕ್ಲಿಪ್ ಅನ್ನು ಘರ್ ಕೆ ಕಲೇಶ್ ಎಂಬ ಎಕ್ಸ್ ಬಳಕೆದಾರರು "ನಾಯಿಯೊಂದು ಮಕ್ಕಳನ್ನು ಮತ್ತೊಂದು ನಾಯಿಯಿಂದ ರಕ್ಷಿಸಲು ಸೂಪರ್ ಹೀರೋನಂತೆ ಹಾರಿತು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಅಂದಿನಿಂದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಾಯಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತವಾಗಿವೆ, ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಡಿಯೋ ನೋಡಿದ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
4 ರಿಂದ 5 ಮಕ್ಕಳನ್ನು ಹಿಂಬಾಲಿಸಿ ಓಡುತ್ತಿದ್ದ ಬೀದಿ ನಾಯಿಯನ್ನು ಗಮನಿಸಿದ ಸಾಕುಪ್ರಾಣಿ, ಎತ್ತರದ ಗೋಡೆಯಿಂದ ಹಾರಿ ಬೀದಿ ನಾಯಿಯ ಮೇಲೆ ದಾಳಿ ಮಾಡಿದೆ. ಬೆಚ್ಚಿಬಿದ್ದ ಬೀದಿ ನಾಯಿ, ಮಕ್ಕಳನ್ನು ಬಿಟ್ಟು ತಕ್ಷಣವೇ ಬೇರೆಡೆಗೆ ಓಡಲು ಪ್ರರಂಭಿಸಿದೆ. ಸದ್ಯ ಈ ಘಟನೆಯಿಂದ ನಾಯಿ ಮಕ್ಕಳ ಮೇಲೆ ದಾಳಿ ಮಾಡಲು ಸಾಧ್ಯವಾಗದ ಕಾರಣ ಅಲ್ಲಿದ್ದ ಮಕ್ಕಳು ನಿಟ್ಟುಸಿರುಬಿಟ್ಟಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಜನರು ಜರ್ಮನ್ ಶೆಫರ್ಡ್‌ನ ರಕ್ಷಣಾತ್ಮಕ ಪ್ರವೃತ್ತಿಗಾಗಿ ಹೊಗಳಿದ್ದಾರೆ.
(ಏಜೆನ್ಸೀಸ್)
ಬಳಿಕ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಜೆಐ ಬಿ. ಆರ್. ಗವಾನಿ ನಾನು ಈ ವಿಚಾರವನ್ನು ಪರಿಶೀಲಿಸುತ್ತೇನೆಂದು ಹೇಳಿದರು. ಸಿಜೆಐ ಅವರ ಹೇಳಿಕೆಯಿಂದ ಪ್ರಾಣಿ ಪ್ರಿಯರಲ್ಲಿ ಭರವಸೆ ಮೂಡಿದೆ.
ಇಂದು (ಆಗಸ್ಟ್ 13) ಬೆಳಗ್ಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ವಿಚಾರವನ್ನು ಪ್ರಸ್ತಾಪ ಮಾಡಲಾಯಿತು. ಅಲ್ಲದೆ, ಬೀದಿ ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಕೊಲ್ಲುವುದನ್ನು ನಿಷೇಧಿಸುವ ಮತ್ತು ಬೀದಿ ನಾಯಿಗಳಿಗಾಗಿಯೇ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಿರುವ ಈ ಹಿಂದಿನ ನ್ಯಾಯಾಲಯದ ಆದೇಶದ ಬಗ್ಗೆ ಸಿಜೆಐ ಅವರಿಗೆ ತಿಳಿಸಲಾಯಿತು.
ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಸತಿ ಪ್ರದೇಶಗಳಿಂದ ಎಲ್ಲ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 11) ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದ ಬಹುತೇಕ ಮಂದಿ ವಿರೋಧಿಸಿದರು. ಬೀದಿ ನಾಯಿಗಳನ್ನು ಬಂಧನ ಮಾಡುವುದು ಸರಿಯಲ್ಲ, ಅವುಗಳಿಗೂ ಸ್ವಾತಂತ್ರ್ಯವಿದೆ ಎಂದು ಧ್ವನಿ ಎತ್ತಿದರು.
ದೆಹಲಿ ಎನ್‌ಸಿಆರ್‌ನಲ್ಲಿರುವ ಎಲ್ಲ ಬೀದಿ ನಾಯಿಗಳನ್ನು 8 ವಾರಗಳ ಒಳಗೆ ಆಶ್ರಯ ತಾಣಗಳಿಗೆ ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ಮತ್ತೊಮ್ಮೆ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.