

ಹನೌ: ಜರ್ಮನಿಯ ಹನೌ ಪಟ್ಟಣದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಬುಧವಾರ ಸಂಜೆ ನಗರದ ಎರಡು ಪ್ರಮುಖ ಹುಕ್ಕಾ ಬಾರ್ಗಳನ್ನು ಗುರಿಯಾಗಿಟ್ಟುಕೊಂಡು ಈ ಗುಂಡಿನ ದಾಳಿ ನಡೆದಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ನಡೆಸಿದವರಿಗಾಗಿ ಇಂದು ಮುಂಜಾನೆಯಿಂದ ಪೊಲೀಸರು ಹುಡುಕುತ್ತಿದ್ದಾರೆ. ಘಟನೆ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿರುವ ಪೊಲೀಸರು, ಮೃತಪಟ್ಟವರ ಬಗ್ಗೆಯಾಗಲೀ, ಫೈರಿಂಗ್ ಬಗೆಗಾಗಲೀ ಹೆಚ್ಚಿನ ಮಾಹಿತಿ ನೀಡಿಲ್ಲ. ಈ ಬಗ್ಗೆ ಜಾಸ್ತಿ ಏನೂ ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮೊದಲು ಗುಂಡಿನ ದಾಳಿ ನಡೆದ ಸ್ಥಳದಿಂದ ಹೊರಟ ಕಪ್ಪುಬಣ್ಣದ ವಾಹನವೊಂದು ಮತ್ತೊಂದು ಹುಕ್ಕಾ ಬಾರ್ಬಳಿ ತೆರಳಿದೆ. ಅಲ್ಲಿ ಕೂಡ ಫೈರಿಂಗ್ ನಡೆದಿದೆ. ಈ ಎರಡೂ ಕಡೆಗಳಿಂದ ಒಟ್ಟು ಎಂದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹನೌ ಪಟ್ಟಣದಲ್ಲಿ ಸುಮಾರು 100,000 ಜನರು ವಾಸವಾಗಿದ್ದಾರೆ ಎನ್ನಲಾಗಿದೆ. (ಪಿಟಿಐ)