ಗಂಗಸ್ ಮತ್ತು ಅಲ್ಪೈನ್ ಎರಡೂ ತಂಡಗಳು ಗುರುವಾರ ತಲಾ ಎರಡು ಪಂದ್ಯಗಳನ್ನು ಆಡಬೇಕಿದ್ದ ಹಿನ್ನೆಲೆಯಲ್ಲಿ, ಈ ಎರಡೂ ತಂಡಗಳ ನಡುವಿನ ಆರಂಭಿಕ ಮುಖಾಮುಖಿ ದಿನದ ಫಲಿತಾಂಶಕ್ಕೆ ಮಹತ್ವದ್ದಾಗಿತ್ತು. ಬಲಿಷ್ಠ ಪ್ರಶಸ್ತಿ ಸ್ಪರ್ಧಿಗಳೆಂದು ಪರಿಗಣಿಸಲ್ಪಡುವ ಗಂಗಸ್ ತಂಡವು, ಪೈಪರ್ಸ್ ವಿರುದ್ಧ ಯಾವುದೇ ಗೇಮ್ ಕಳೆದುಕೊಳ್ಳದೆ ಗೆದ್ದು ತಮ್ಮ ಸಾಮರ್ಥ್ಯವನ್ನು ತೋರಿಸಿತು.ಸ್ಟಾವ್ರುಲಾ ತ್ಸೊಲಕಿಡೌ ಅವರು ಕೊನೆರು ಹಂಪಿಗೆ ಸೋಲುಣಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ಸ್ ತಂಡದ ಗೆಲುವಿನ ಅಭಿಯಾನಕ್ಕೆ ಚಾಲನೆ ನೀಡಿದರು. ಸೂಪರ್ ಸ್ಟಾರ್ ಪುರುಷರ ಬೋರ್ಡ್‌ನಲ್ಲಿ ಎರಡು ಬಾರಿಯ ವಿಶ್ವಕಪ್ ವಿಜೇತ ಲೆವೊನ್ ಅರೋನಿಯನ್ ಅವರು ಹೆಚ್ಚುವರಿ ಕುದುರೆಯ ಲಾಭವನ್ನು ಎಂಡ್‌ಗೇಮ್‌ನಲ್ಲಿ ಸಮರ್ಥವಾಗಿ ಬಳಸಿಕೊಂಡು ಅನಿಶ್ ಗಿರಿಯನ್ನು 61 ನಡೆಗಳಲ್ಲಿ ಮಣಿಸಿದರು.