ಗಾಜಾ ಶಾಂತಿ ಒಪ್ಪಂದ; ಅಮೆರಿಕಾ ಅಧ್ಯಕ್ಷ ಟ್ರಂಪ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ| PM Modi

Untitled design - 2025-10-04T083951.121
Published on

PM Modi: ಇಸ್ರೇಲ್-ಹಮಾಸ್ ಯುದ್ಧ ನಿಲ್ಲಿಸುವ ಗಾಜಾ ಶಾಂತಿ ಒಪ್ಪಂದ ಯಶಸ್ವಿಯಾಗುತ್ತಿರುವ ಮತ್ತು ಮೊದಲ ಹಂತವಾಗಿ ಒತ್ತೆಯಾಳುಗಳ ಬಿಡುಗಡೆಗೆ ಎರಡು ಕಡೆಯವರು ಸಹಿ ಹಾಕಿದ ಹಿನ್ನೆಲೆ ಇಂದು ಗುರುವಾರ (ಅ. 09) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಪ್ರಧಾನಿ ಮೋದಿ, "ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಐತಿಹಾಸಿಕ ಗಾಜಾ ಶಾಂತಿ ಯೋಜನೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದೆ. ಭಾರತ ಮತ್ತು ಯುಎಸ್ ವ್ಯಾಪಾರ ಮಾತುಕತೆಗಳ ಬಗ್ಗೆಯೂ ಚರ್ಚಿಸಿಲಾಗಿದೆ. ಮುಂಬರುವ ವಾರಗಳಲ್ಲಿ ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಮೊದಲ ಹಂತಕ್ಕೆ ಎರಡು ಕಡೆಯವರು ಈಜಿಪ್ಟ್‌ನಲ್ಲಿ ಸಹಿ ಹಾಕಿವೆ ಎಂದು ಇಸ್ರೇಲ್ ದೃಢಪಡಿಸಿತು. ಈಜಿಪ್ಟ್‌ನಲ್ಲಿನ ಒಪ್ಪಂದವು, ಅಕ್ಟೋಬರ್ 2023 ರಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಎರಡು ವರ್ಷಗಳಿಗೂ ಹೆಚ್ಚು ಕಾಲ ನಡೆದ ಯುದ್ಧದ ನಂತರ, ಕಳೆದ ತಿಂಗಳು ಟ್ರಂಪ್ ಘೋಷಿಸಿದ ಗಾಜಾಗೆ 20 ಅಂಶಗಳ ಶಾಂತಿ ಯೋಜನೆಯನ್ನು ಅನುಮೋದಿಸುತ್ತದೆ.

ಡೊನಾಲ್ಡ್​ ಟ್ರಂಪ್ ಭಾನುವಾರ(ಅ. 12) ಜೆರುಸಲೆಮ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net