ಕಾನೂನು ಪಾಲನೆಯೊಂದಿಗೆ ಸಂಸ್ಕಾರ ಉಳಿಸುವಂತೆ ಹಬ್ಬ ಆಚರಿಸಿ

3-RNR-01
Published on

ರಾಣೆಬೆನ್ನೂರ: ಗೌರಿ ಗಣೇಶ ಹಾಗೂ ಈದ್​ ಮೀಲಾದ್​ ಹಬ್ಬವನ್ನು ಕಾನೂನು ಪಾಲನೆಯೊಂದಿಗೆ ಸಂಸತಿ, ಸಂಸ್ಕಾರ ಉಳಿಸುವಂತೆ ಆಚರಿಸಬೇಕು. ಕಾನೂನು ಉಲ್ಲಂಘಿಸಿದರೆ ವಿನಾಕಾರಣ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ$್ಮಣ ಶಿರಕೋಳ ಹೇಳಿದರು.
ಗೌರಿ ಗಣೇಶ ಹಬ್ಬ ಹಾಗೂ ಈದ್​ ಮೀಲಾದ್​ ನಿಮಿತ್ತ ನಗರದ ವರ್ತಕರ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲರೂ ಗಣೇಶ ಪ್ರತಿಷ್ಟಾಪನೆಗೆ ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ ಗಣೇಶ ಮೂತಿರ್ ಪ್ರತಿಷ್ಠಾಪನೆ ಮಾಡಿದ ಮಂಡಳಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ನೀಡಿದ ಮೂವತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸ್​ ಇಲಾಖೆಯು ಎಲ್ಲ ರೀತಿಯ ಸಹಕಾರ ನೀಡುತ್ತದೆ. ಆದರೆ ಮಂಡಳಿ ಮುಖಂಡರು ನಮಗೆ ಸಲಹೆ ನೀಡಬೇಕು. ಗಣೇಶ ಹಬ್ಬ ಹಾಗೂ ಈದ್​ ಮಿಲಾದ್​ ಸಾಮರಸ್ಯ ಹಬ್ಬವಾಗಿ ಮಾಡಬೇಕು ಎಂದರು.
ಹಿಂದು&-ಮುಸ್ಲಿಂಮರು ಪ್ರೀತಿ -ವಿಶ್ವಾಸದ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಬೇಕು. ಅಂದಾಗ ಮಾತ್ರ ಹಬ್ಬಕ್ಕೆ ಅರ್ಥ ಬರುತ್ತದೆ. ಇದರ ಜತೆಗೆ ಎಲ್ಲರೂ ಕಾನೂನಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ, ಸಿಪಿಐಗಳಾದ ಬಸವರಾಜ, ಸಿದ್ದೇಶ ಎಂ.ಡಿ., ತಹಸೀಲ್ದಾರ್​ ಆರ್​.ಎಚ್​. ಬಾಗವಾನ್​, ಆಯುಕ್ತ ಫಕ್ಕೀರಪ್ಪ ಇಂಗಳಗಿ, ಕೆಇಬಿ ಎಇಇ ಪ್ರಸಾದ ಬಾಬು, ಕೆಇಬಿ ಇಇ ಲಕ್ಷ$್ಮಣ ಹಾಗೂ ನಗರಸಭೆ ಸದಸ್ಯರು, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net