ವೆಲ್ಲೂರು:
ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ(ವಿಐಟಿ), 39 ನೇ ವಾರ್ಷಿಕ ಘಟಿಕೋತ್ಸವ ನಡೆಯಿತು.
ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಘೆಉಊ) ಪ್ರೊ. ಅನಿಲ್ ಡಿ. ಸಹಸ್ರಬುಧೆ ಅವರು ಮಾತನಾಡಿ, ಯುವ ಪದವೀಧರರು ನಿರಂತರವಾಗಿ ಕಲಿಯುವವರಾಗಿರಬೇಕು ಮತ್ತು ಅವರ ಉದ್ಯೋಗಾವಕಾಶವನ್ನು ಸುಧಾರಿಸಲು ಶ್ರಮಿಸಬೇಕು ಎಂದರು.
ಕೌಶಲ್ಯಗಳನ್ನು ಪಡೆದುಕೊಳ್ಳುವುದು ಮತ್ತು ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳುವುದು ಅವರ ವೃತ್ತಿ ಭವಿಷ್ಯ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಉದ್ಯೋಗಗಳು ಸಾಕಷ್ಟಿವೆ ಮತ್ತು ನೀವು ಯಾವ ವೃತ್ತಿಯನ್ನು ಆರಿಸಿಕೊಂಡಿದ್ದೀರಿ, ನೀವು ಹೇಗೆ ಬಹು ಆಯಾಮದವರಾಗುತ್ತೀರಿ ಮತ್ತು ನಿಮ್ಮನ್ನು ಅಭಿವೃದ್ಧಿಪಡಿಸುತ್ತೀರಿ ಎಂಬುದು ಮುಖ್ಯ ಎಂದು ಅವರು ಹೇಳಿದರು.
ಅಖಖಇಏಅ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ಸ್ ಇಂಡಿಯಾ ಪ್ರೈವೇಟ್ ಲಿ., ಹಿರಿಯ ಕಾರ್ಯನಿರ್ವಾಹಕ ಸಲಹೆಗಾರ ಟಿ.ಆರ್. ಪರಶುರಾಮನ್ ಅವರು ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಮತ್ತು ವೈಫಲ್ಯಗಳಿಂದ ಕಲಿಯಬೇಕು ಎಂದು ಹೇಳಿದರು.
ವಿಐಟಿ ಸಂಸ್ಥಾಪಕ ಮತ್ತು ಕುಲಪತಿ ಡಾ. ಜಿ. ವಿಶ್ವನಾಥನ್, ಶಿಕ್ಷಣದ ಸನ್ನಿವೇಶವನ್ನು ಇನ್ನಷ್ಟು ಸುಧಾರಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಪಾತ್ರವನ್ನು ಒತ್ತಿ ಹೇಳಿದರು.
ಗ್ರಾಮೀಣ, ಬಡ ಮತ್ತು ಮಧ್ಯಮ ವರ್ಗದ ಜನರು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನದೊಂದಿಗೆ ಪ್ರೋತ್ಸಾಹಿಸಬೇಕು. ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ವೆಚ್ಚವನ್ನು ಹೆಚ್ಚಿಸಬೇಕೆಂದರು.
ವಿಐಟಿ ಉಪಾಧ್ಯಕ್ಷ ಶಂಕರ್ ವಿಶ್ವನಾಥನ್ ಮತ್ತು ಡಾ. ಜಿ ವಿ ಸೆಲ್ವಂ ಮತ್ತು ಸಹ ಉಪಾಧ್ಯಕ್ಷೆ ಕಾದಂಬರಿ ಎಸ್ ವಿಶ್ವನಾಥನ್,, ಪ್ರೊ.ಕಾಂಚನಾ ಭಾಸ್ಕರನ್ ವಿ.ಎಸ್., ವಿಐಟಿಯ ಉಪಕುಲಪತಿ ಪ್ರೊ.ಪಾರ್ಥಸಾರತಿ ಮಲ್ಲಿಕ್, ಪ್ರೊ.ತ್ಯಾಗರಾಜನ್, ಡಾ.ಟಿ.ಜಯಭಾರತಿ ಸಹ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಒಟ್ಟು 8,205 ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಮತ್ತು 357 ಪಿಎಚ್‌ಡಿ. ಪದವೀಧರರಿಗೆ ಪದವಿ ಮತ್ತು 65 ಅಭ್ಯರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು.