ಹೇರ್​​ ಕಲರ್​ ಅಭಿಯಾನಕ್ಕೆ ಪ್ರಶಂಸೆ

gfinal
Published on

ಹುಬ್ಬಳ್ಳಿ: ನಗರದ ಗೋಪನಕೊಪ್ಪ ಮನೋಜ ಎಸ್ಟೇಟ್ ತುಳಸಿ ವಿಹಾರ ಅಪಾರ್ಟ್ ಮೆಂಟ್ ನಲ್ಲಿ ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ಭಾನುವಾರ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನವು ಸಾರ್ವಜನಿಕರು, ಮಹಿಳೆಯರಿಂದ ಅಪಾರ ಪ್ರಶಂಸೆಗೆ ಪಾತ್ರವಾಗಿದೆ.

ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡಿದ್ದು, ವಿಶೇಷವಾಗಿ ಮಹಿಳೆಯರು ಹೇರ್ ಕಲರಿಂಗ್ ಅಭಿಯಾನದ ವಿಳಾಸ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಂಪನಿಯ ಪರಿಣಿತರು, ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಮಾಡಿಸಿದರು.

ಜೂ. 10ರಂದು ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಹುಬ್ಬಳ್ಳಿ ದೇವಾಂಗಪೇಟ ಮುಖ್ಯ ರಸ್ತೆಯ ಸಿಲ್ವರ್ ಪಾರ್ಕ್ ಗಾರ್ಡನ್‌ನಲ್ಲಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆದಿತ್ತು. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೊಬೈಲ್ ಫೋನ್ ತಂದು ಒಟಿಪಿ ಆಧಾರಿತ ನೋಂದಣಿ ಮಾಡಿಸಿಕೊಂಡು ಈ ಅಭಿಯಾನದ ಪ್ರಯೋಜನ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದರು.

ರಾಜ್ಯಾದ್ಯಂತ ಏಪ್ರಿಲ್​ ತಿಂಗಳಿನಿಂದಲೂ ನಡೆಯುತ್ತಿರುವ ಈ ಅಭಿಯಾನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಜುಲೈ ಅಂತ್ಯಕ್ಕೆ ಈ ಅಭಿಯಾನ ಮುಕ್ತಾಯವಾಗಲಿದೆ.

ಅಲ್ಲದೇ ನೀವೂ ಸಹಿತ ಈ ಅಭಿಯಾನದ ಸದುಪಯೋಗ ಪಡೆದುಕೊಂಡು, ಉಚಿತ ಹೇರ್​​ ಕಲರಿಂಗ್​ ಮಾಡಿಸಿಕೊಳ್ಳಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net