

ಶಿವಮೊಗ್ಗ: ಬಸವೇಶ್ವರ ವೃತ್ತದಲ್ಲಿರುವ ವಿಶ್ವ ಮಾನವ, ಮಹಾನ್ ಮಾನವತವಾದಿ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಬಳಿಕ ಮಾತನಾಡಿದ ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಅನುಭವ ಮಂಟಪದಿಂದ ತಳವರ್ಗದ ಪ್ರತಿಯೊಬ್ಬರೂ ಇಂದಿನ ದಿನಮಾನದಲ್ಲಿ ತಲೆಯೆತ್ತಿ ಹೆಮ್ಮೆಯಿಂದ ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಬಸವಣ್ಣನವರ ಅನುಯಾಯಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಇಡೀ ದೇಶ, ನಾಡು ಒಂದು ನಾವೆಲ್ಲರೂ ಅಣ್ಣತಮ್ಮಂದಿರು ಒಟ್ಟಾಗಿ ಬಾಳಬೇಕು. ಸರ್ವರಿಗೆ ಸಮಪಾಲು ಸಮಬಾಳು ಸಿಗಬೇಕು ಎಂಬುವುದುಬಸವಣ್ಣನವರ ತತ್ವ ಸಿದ್ದಾಂತವಾಗಿತ್ತು. ಅನುಭವ ಮಂಟಪವೇ ಇರಲಿಲ್ಲ. ಅದು ಸುಳ್ಳು ಎನ್ನುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಸತ್ಯವನ್ನು ಸುಳ್ಳೆಂದು ಸಾಧಿಸಲಾಗುವುದಿಲ್ಲ ಎಂದರು.
ಮಹಾಸಭಾ ಜಿಲ್ಲಾಧ್ಯಕ್ಷ ರುದಮುನಿ ಸಜ್ಜನ್, ಪಮುಖರಾದ ರೇಣುಕಾರಾಧ್ಯ, ಎಚ್.ಸಿ.ಯೋಗೀಶ್, ಬಳ್ಳೇಕೆರೆ ಸಂತೋಷ್, ಮಹಾರುದ್ರ, ಸೋಮನಾಥ್, ಗಿರೀಶ್, ಸುರೇಖಾ ಪಾಲಾಕ್ಷಪ್ಪ, ಅನಿತಾ ರವಿಶಂಕರ್, ಜಿ.ವಿಜಯ್‌ಕುಮಾರ್, ಈ.ವಿಶ್ವಾಸ್, ಅಂಕುಶ್ ಮತ್ತಿತರರು ಉಪಸ್ಥಿತರಿದ್ದರು.