VIDEO: ರೈಲಿನೊಳಗೆ ಗಾರ್ಬಾ ನೃತ್ಯ ಮಾಡಿದ ಹಿರಿಯರು; ವಿಡಿಯೋ ವೈರಲ್

Untitled-design-2023-10-23T120915.749
Published on

ಮುಂಬೈ: ನವರಾತ್ರಿ ಹಬ್ಬದ ಹಿನ್ನೆಲೆ ರೈಲು, ಬಸ್​ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಊರಿನಿಂದ ಊರಿಗೆ ತೆರಳುವ ಜತೆಗೆ ಹಬ್ಬದ ಸಲುವಾಗಿ ಪ್ರಯಾಣ ಬೆಳೆಸುವವರ ಪೈಕಿ ಹಿರಿಯರು, ಕಿರಿಯರು ಸೇರಿದಂತೆ ಎಲ್ಲಾ ವಯಸ್ಸಿನವರು ಸಂಚರಿಸುತ್ತಾರೆ. ಈ ಮಧ್ಯೆ ಮುಂಬೈ ರೈಲಿನಲ್ಲಿ ಹಿರಿಯರು ಗಾರ್ಬಾ ಹಾಡಿಗೆ ನೃತ್ಯ ಮಾಡಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿದೆ.

ಹಿರಿಯ ಪ್ರಯಾಣಿಕರು ವಯಸ್ಸನ್ನು ಲೆಕ್ಕಿಸಿದೆ ಕುಣಿದಿರುವುದು ಇದೀಗ ಅನೇಕರ ಗಮನವನ್ನು ಸೆಳೆದಿದೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಸ್ಥಳೀಯ ರೈಲಿನಲ್ಲಿ ಗಾರ್ಬಾ ನೃತ್ಯ ಮಾಡಿದ ಹಿರಿಯ ಪ್ರಯಾಣಿಕರು ಈ ಮೂಲಕ ನವರಾತ್ರಿ ಹಬ್ಬವನ್ನು ತಮ್ಮ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ.

ಮುಂಬೈ ರೈಲು ಅಂದ ಕ್ಷಣ ಎಲ್ಲರಿಗೂ ನೆನಪಾಗುವುದು ಕಿಕ್ಕಿರಿದು ತುಂಬಿರುವ ಪ್ರಯಾಣಿಕರು. ಲೋಕಲ್​ ಟ್ರೈನ್​ಗಳಲ್ಲಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಈ ರೈಲುಗಳಲ್ಲಿ ಜಾಗ ಪಡೆಯುವುದೇ ಕಷ್ಟ ಅಂತದ್ದರಲ್ಲಿ ಇಲ್ಲಿನ ಒಂದು ಬೋಗಿಯೊಳಗೆ ಹಿರಿಯರ ದಂಡೊಂದು ಗಾರ್ಬಾ ಹಾಡಿಗೆ ಮನಬಿಚ್ಚಿ ನೃತ್ಯ ಮಾಡಿದ್ದಾರೆ. ಸದ್ಯ ಈ ಒಂದು ವಿಡಿಯೋ ಇದೀಗ ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net