ನಾರ್ಗಾಣೆ ಗ್ರಾಮದಲ್ಲಿ ಗಣಪತಿ ಶೋಭಾಯಾತ್ರೆ

01sunti01.
ಸುಂಟಿಕೊಪ್ಪದ ಶ್ರೀ ನಾರ್ಗಾಣೆ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿ ಉತ್ಸವ ಮೂರ್ತಿಯ ಶೋಭಾಯಾತ್ರೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
Published on

ಸುಂಟಿಕೊಪ್ಪ: ಇಲ್ಲಿನ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ 12ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಇರಿಸಿ ಗ್ರಾಮದ ಮುಖ್ಯ ಬೀದಿಯಲ್ಲಿ ಅದ್ದೂರಿಯಾಗಿ ಶೋಭಾಯಾತ್ರೆ ನಡೆಸುವ ಮೂಲಕ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಭಾನುವಾರ ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಗೆ 5 ದಿನಗಳವರೆಗೆ ಆರ್ಚಕರಾದ ಅವಿನಾಶ್ ಆರಾಧ್ಯ ಹಾಗೂ ಸಂಗಡಿಗರು ವಿಶೇಷ ಪೂಜೆ ಸಲ್ಲಿಸಿದರು. ಮೂರ್ತಿಯನ್ನು ನಾರ್ಗಾಣೆ ಗ್ರಾಮದ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು. ನಂತರ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಯನ್ನು ಗದ್ದೆಹಳ್ಳದ ನೆಹರು ವೃತ್ತದವರೆಗೆ ಶೋಭಾಯಾತ್ರೆ, ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಧ್ಯಕ್ಷ ಎಂ.ಜೆ.ಆಕಾಶ್, ಕಿರಣ್, ಕಾರ್ತಿಕ್ ಸುಧಿ, ಮೋಹನ್, ಬಿ.ಕೆ.ರಾಜೇಶ್, ಪುನಿತ್‌ಕುಮಾರ್, ವಸಂತ, ವಿವೇಕ್ ರೈ, ವಿನೋದ್, ಕುಶಾಲಪ್ಪ, ಬಿ.ಡಿ.ರಾಜುರೈ, ಶರತ್, ಗ್ರಾಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯೆ ಮಂಜುಳಾ, ಗೀತಾ, ಸಮಿತಿ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net