ಗಾಂಜಾ ಮಾರುತ್ತಿದ್ದ ಮೂವರ ಬಂಧನ

2cc42aeb-7d55-4766-9798-be7f8afd30d5
Published on

ಕಲಬುರಗಿ: ನಗರದ ಎರಡು ಕಡೆ ಪ್ರತ್ಯೇಕವಾಗಿ ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸಂಘತ್ರಸವಾಡಿಯಿಂದ ದರ್ಗಾಗೆ ಹೋಗುವ ಮಾರ್ಗದಲ್ಲಿನ ಹಫ್ತಗುಂಬಜ್ ಬಳಿ ಗಾಂಜಾ ಮಾರುತ್ತಿದ್ದ ಬ್ಯಾಂಕ್ ಕಾಲನಿಯ ನಯಾ ಮೊಹಲ್ಲಾದ ಅಲಿ ಮಶಾಕ ಪಟೇಲ್, ಮಹ್ಮದ್ ಶೋಯೇಬ್ ಉಸ್ಮಾನ್‌ನನ್ನು ಬಂಧಿಸಿ, ಬಂಧಿತರಿಂದ 1 ಕೆ.ಜಿ.ಗಾಂಜಾ, ಬೈಕ್, ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ದರ್ಗಾ ಹತ್ತಿರದ ಕಾಲಾಹುಡ್ ಬಡಾವಣೆಯ ಹುಸೇನಿ ಪೇಠ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಬಂಧಿಸಿ, ಮೂರು ಸಾವಿರ ಮೌಲ್ಯದ 300 ಗ್ರಾಂ ಗಾಂಜಾ, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಖಾಜಾ ಕಾಲನಿಯ ಅಬ್ದುಲ್ ಶುಕೂರ್ ಖೇಳಗಿವಾಲೆ ಬಂಧಿತ ಆರೋಪಿ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಉಪ ಪೊಲೀಸ್ ಆಯುಕ್ತ ಐ.ಎ.ಚಂದ್ರಪ್ಪ ಮಾರ್ಗದರ್ಶನದಲ್ಲಿ ಪಿ.ಐ.ದಿಲೀಪಕುಮಾರ ಸಾಗರ, ಸಿಬ್ಬಂದಿ ಯಲ್ಲಪ್ಪ, ಅಂಬಾಜಿ, ವಿಶ್ವನಾಥ, ಅಶೋಕ ಕಟಕೆ, ಶಿವಕುಮಾರ, ಅಶೋಕ, ನಾಗರಾಜ, ಸುನೀಲಕುಮಾರ ದಾಳಿಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net