GirlFriend ಬರ್ತ್​ಡೇಯನ್ನು ಡಿಸಿಪಿ ಕಚೇರಿ ಎದುರು ಆಚರಿಸಿ ಪೊಲೀಸರಿಗೆ ಸವಾಲೆಸೆದ ಗ್ಯಾಂಗ್​​​ಸ್ಟರ್;​ ಆಘಾತಕಾರಿ ವಿಡಿಯೋ ವೈರಲ್​

Gangster
Published on

ಕಾನ್ಪುರ: ಸ್ಮಾರ್ಟ್​ಫೋನ್​ ಯುಗದಲ್ಲಿ ರೀಲ್ಸ್ ಹಾವಳಿ ಹೆಚ್ಚುತ್ತಿದ್ದು, ಜನ ವೈರಲ್​ ಆಗುದವ ಭರದಲ್ಲಿ ಇನ್ನಿಲ್ಲದ ಕೆಲಸಗಳಿಗೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಇದೀಗ ಉತ್ತರಪ್ರದೇಶದ ಕಾನ್ಪುರದಲ್ಲಿ ಗ್ಯಾಂಗ್​ಸ್ಟರ್ ಒಬ್ಬ ತನ್ನ ಗರ್ಲ್​ಫ್ರೆಂಡ್​ (Girlfriend) ಜನುಮದಿನವನ್ನು ಡಿಸಿಪಿ ಕಚೇರಿ ಎದುರು ಆಚರಿಸಿ ಪೊಲೀಸರಿಗೆ ಸವಾಲ್​ ಎಸೆದಿರುವ ಘಟನೆ ನಡೆದಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕಾನ್ಪುರದ ಬರ್ರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಡಿಸಿಪಿ ಕಚೇರಿ ಎದುರು ಗ್ಯಾಂಗ್​ಸ್ಟರ್​ ಓರ್ವ 12 ಬೆಂಗಾವಲು ವಾಹನಗಳೊಂದಿಗೆ ಕಾರುಗಳನ್ನು ಅಪಾಯಕಾರಿಯಾಗಿ ಚಲಾಯಿಸಿ ಗರ್ಲ್​ಫ್ರೆಂಡ್​ (Girlfriend) ಜನುಮದಿನವನ್ನು ಆಚರಿಸಿ ಉದ್ಧಟತನ ಮೆರೆದಿದ್ದಾನೆ. ವಿಡಿಯೋದಲ್ಲಿ ಸೆರೆಯಾಗಿರುವ ವಾಹನಗಳಲ್ಲಿ ನಂಬರ್​ ಪ್ಲೇಟ್​ ಅಳವಡಿಸದೆ ಇರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅಪಾಯಕಾರಿ ಸ್ಟಂಟ್​ ಮಾಡಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಹೆಸರಿ ತಿಳಿದು ಬಂದಿಲ್ಲವಾದರೂ ಕಪ್ಪು ಬಣ್ಣದ ಸ್ಕಾರ್ಪಿಯೋ ಡ್ರೈವ್​ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಆತನ ಪಕ್ಕದಲ್ಲಿ ಹುಡುಗಿಯೊಬ್ಬಳು (GirlFriend) ಕುಳಿತುಕೊಂಡಿದ್ದು, ಆತ ಯಾವುದೇ ಭಯವಿಲ್ಲದೇ ಡ್ರೈವಿಂಗ್ ಮಾಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಕುರಿತು ಮಾತನಾಡಿರುವ ಕಾನ್ಪುರ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆತ ಅಪರಾಧಿಯಾಗಿದ್ದು, ಅತ್ಯಾಚಾರ ಪ್ರಕರಣಗಳಲ್ಲಿಯೂ ಈತನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಗ್ಯಾಂಗ್​ಸ್ಟರ್​ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕಾನ್ಪುರ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net