

ಬೆಂಗಳೂರು: ಕದ್ದ ಕಾರಿನಲ್ಲಿ ಮನೆ ಕೆಲಸದಾಕೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಈತನ ಸಹಚರ ಶಬರೀಶ್‌ಗೂ ಗುಂಡು ಹೊಡೆದು ಬಂಧಿಸಿದ್ದರು. ನೆಲಮಂಗಲ ನಿವಾಸಿ ಇಮ್ರಾನ್ ಪಾಷಾ (26) ಬಂಧಿತ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗಾಗಲೇ ಶಬರೀಶ್‌ನನ್ನು ಬಂಧಿಸಿದ್ದು, ಈತನ ಸಹಚರ ಮುರುಳಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಇಮ್ರಾನ್ ನಡೆಸಿದ ಹಲ್ಲೆಯಿಂದ ಪೇದೆ ಮಧುಕುಮಾರ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ೆ.10ರ ರಾತ್ರಿ 12.30ರಲ್ಲಿ ನಾಗರಾಜು ಎಂಬುವರು ಕಾರಿನಲ್ಲಿ ದೇವನಹಳ್ಳಿ ರಸ್ತೆ ಕೋಗಿಲು ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿ ಮಾರಕಾಸ ತೋರಿಸಿ ಬೆದರಿಸಿದ್ದರು. 700 ರೂ., 1 ಮೊಬೈಲ್, ಎಟಿಎಂ ಕಾರ್ಡ್ ಮತ್ತು ಕಾರು ಸುಲಿಗೆ ಮಾಡಿದ್ದರು. ಆನಂತರ ಅದೇ ಕಾರಿನಲ್ಲಿ ಆರೋಪಿಗಳು ಮದ್ಯ ಸೇವನೆ ಮಾಡಿಕೊಂಡು ಕೆಂಚನಹಳ್ಳಿ ರಸ್ತೆಯಲ್ಲಿ ನಿಂತಿದ್ದರು. ಬೆಳಗಿನ ಜಾವ 4.30ರಲ್ಲಿ ಮನೆ ಕೆಲಸದಾಕೆ ಕೆಲಸಕ್ಕಾಗಿ ಹೋಗುತ್ತಿದ್ದಾಗ ಆಕೆಯನ್ನು ಕಾರಿಗೆ ಎಳೆದುಕೊಂಡು ಮೂವರು ಸಾಮೂಹಿಕ ಅತ್ಯಾಚಾರ ಎಸಗಿ ಬಿಟ್ಟಿದ್ದರು. ನೊಂದ ಮಹಿಳೆ ದಿಕ್ಕು ತೋಚದೆ ಕಂಗಾಲಾಗಿದ್ದರು.
ಇತ್ತ ಕಾರು ಮಾಲೀಕ ನಾಗರಾಜು ಕೊಟ್ಟ ದೂರಿನ ಮೇರೆಗೆ ಯಲಹಂಕ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಶಬರೀಶ್ ಗ್ಯಾಂಗ್ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಗುರುವಾರ ಶಬರೀಶ್ ಕಾಲಿಗೆ ಗುಂಡು ಹಾರಿಸಿ ಬಂದಿಸಿದ್ದರು. ಇಮ್ರಾನ್ ಮತ್ತು ಮುರುಳಿ ತಪ್ಪಿಸಿಕೊಂಡಿದ್ದರು. ಕಾರು ಮತ್ತು ಶಬರೀಶ್ ೆಟೋ ಗುರುತು ಹಿಡಿದ ಸಂತ್ರಸ್ತೆ, ಯಲಹಂಕ ನ್ಯೂಟೌನ್ ಠಾಣೆಗೆ ದೂರು ನೀಡಿದ್ದರು. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದರು.
ಎಂ.ಎಸ್.ಪಾಳ್ಯ ಜಂಕ್ಷನ್‌ನಲ್ಲಿ ಇಮ್ರಾನ್ ಬೈಕ್‌ನಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಯಲಹಂಕ ನ್ಯೂ ಟೌನ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿತ್ತು. ಖಾಕಿ ಕಂಡ ಕೂಡಲೇ ಆರೋಪಿ ಬೈಕ್ ಚಲಾಯಿಸಿಕೊಂಡು ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಫಾರಂ ಬಳಿ ಕೆಳಗೆ ಬಿದ್ದಾಗ ವಶಕ್ಕೆ ಪಡೆಯಲು ಪೇದೆ ಮಧುಕುಮಾರ್ ಹತ್ತಿರ ಹೋಗಿದ್ದರು. ಮಾರಕಾಸದಿಂದ ಆರೋಪಿ ಪೇದೆ ಮೇಲೆ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗೆ ಇನ್‌ಸ್ಪೆಕ್ಟರ್ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿದಾಗ ಆರೋಪಿ ಕಾಲಿಗೆ ಬಿದ್ದಿದೆ. ಕುಸಿದು ಬಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
15 ಪ್ರಕರಣಗಳಲ್ಲಿ ಬೇಕಾಗಿದ್ದ: ಬಂಧಿತ ಇಮ್ರಾನ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ, ಅತ್ಯಾಚಾರ ಸೇರಿದಂತೆ 15 ಅಪರಾಧ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ದೇವನಹಳ್ಳಿ ತಾಲೂಕು ಗುರುವನಹಳ್ಳಿಯ ಮುರುಳಿ (21) ವಿರುದ್ಧ 5 ಅಪರಾಧ ಪ್ರಕರಣಗಳು ದಾಖಲಾಗಿವೆ.