ಮಾರುಕಟ್ಟೆಗೆ ಲಗ್ಗೆ ಇಟ್ಟ ಗಣಪ

klr ganesha story
ಕೋಲಾರದ ಜೂನಿಯರ್​ ಕಾಲೇಜಿನಲ್ಲಿ ಮೈದಾನದಲ್ಲಿ ಮಾರಾಟಕ್ಕೆ ಇಡಲಾಗಿರುವ ಗಣೇಶ ಮೂರ್ತಿಗಳು.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಶ್ರಾವಣದ ನಂತರ ಬರುವ ಮೊದಲ ಹಬ್ಬವಾದ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿಯಿದ್ದು, ಮಾರುಕಟ್ಟೆಗೆ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ.

ಹಬ್ಬಕ್ಕೆ ಇನ್ನೂ ನಾಲ್ಕು ದಿನಗಳು ಬಾಕಿಯಿದ್ದು, ಎಲ್ಲೆಡೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಮಾರಾಟ ಭರದಿಂದ ಸಾಗಿದೆ. ಜಿಲ್ಲಾ ಕೇಂದ್ರ ಸೇರಿ ವಿವಿಧ ಪಟ್ಟಣಗಳಲ್ಲಿ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ. ಈಗಾಗಲೇ ವಿವಿಧ ವಿನ್ಯಾಸದ ಗಣಪನ ಮೂರ್ತಿಗಳ ಮಾರಾಟ ಶುರುವಾಗಿದೆ. ದೇವಾಲಯಗಳ ಸಮಿತಿ, ಯುವಕರ ಬಳಗ, ಸಂ ಸಂಸ್ಥೆಗಳ ಮುಖಂಡರು ಆಕರ್ಷಕ ಗಣಪನ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದಾರೆ.

ಯುವಕರು ನಗರ, ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಉತ್ಸಾಹದಿಂದ ಸಿದ್ಧರಾಗಿದ್ದು, ಬೆಲೆ ಏರಿಕೆ ನಡುವೆಯೂ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಇದರ ಜತೆಗೆ ಕೆರೆ, ಕುಂಟೆ, ಕಲ್ಯಾಣಿಗಳಲ್ಲಿ ಸಮೃದ್ಧವಾಗಿ ನೀರು ಶೇಖರಣೆಯಾಗಿದ್ದು, ವ್ಯಾಪಾರಸ್ಥರು ನಿರೀೆಗೂ ಮೀರಿ ವಹಿವಾಟು ನಡೆಯುವ ನಿರೀೆಯಲ್ಲಿದ್ದಾರೆ.

ಕೋಲಾರದ ಜೂನಿಯರ್​ ಕಾಲೇಜು ಮೈದಾನ, ಬಂಗಾರಪೇಟೆ, ಕೆಜಿಎ್​, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಮಾಲೂರು ತಾಲೂಕು ಕೇಂದ್ರ ಸೇರಿ ಗ್ರಾಮೀಣ ಭಾಗದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತದೆ.

ಕಟ್ಟುನಿಟ್ಟಿನ ಆದೇಶ

ಗಣೇಶ ಚತುರ್ಥಿ ಹಾಗೂ ಈದ್​ ಮಿಲಾದ್​ ಹಬ್ಬವು ಒಂದೇ ವಾರದಲ್ಲಿ ಇರುವುದರಿಂದ ಯಾವುದೇ ರೀತಿ ಅಹಿತಕರ ಟನೆಗಳು ಸಂಭವಿಸಿದಂತೆ ಜಿಲ್ಲಾಡಳಿತ, ಪೊಲೀಸ್​ ಇಲಾಖೆಯು ವಿವಿಧ ಸಂ&ಸಂಸ್ಥೆಗಳ ಮುಖಂಡರ ಸಭೆ ನಡೆಸಿ ಶಾಂತಿ ಸೌಹಾರ್ದವಾಗಿ ಆಚರಿಸಲು ಸೂಚನೆ ನೀಡಿದೆ. ನಗರದಾದ್ಯಂತ ಗಣೇಶಮೂರ್ತಿ ಮಾರಾಟ ಮಾಡಲು ನಗರಸಭೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಅದಕ್ಕೂ ಮುನ್ನ ನಗರಸಭೆಯ ಅಧಿಕಾರಿಗಳು ಗಣೇಶನನ್ನು ಮಾಡುವ ಮತ್ತು ಮಾರಾಟ ಮಾಡುವವರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪಿಒಪಿ (ಪ್ಲಾಸ್ಟರ್​ ಆಫ್​ ಪ್ಯಾರಿಸ್​) ಗಣಪ ಮತ್ತು ರಾಸಾಯನಿಕ ಮತ್ತು ಆಯಿಲ್​ ಪೇಂಟಿಂಗ್​ಗಳನ್ನು ಬಳಸಬಾರದು ಎಂಬುದಾಗಿ ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಿದೆ.

ಅನುಮತಿ ಕಡ್ಡಾಯ:

ಏಕ ಗವಾಕ್ಷಿ ಮೂಲಕ ಅನುಮತಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಯವರು ಪೊಲೀಸ್​ ಇಲಾಖೆ, ಆಯಾ ಸ್ಥಳಿಯ ಸಂಸ್ಥೆಗಳು, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಸಮಿತಿಯವರ ಓಡಾಟ ತಪ್ಪಿಸಲು ಹಲವು ವರ್ಷಗಳಿಂದ ಏಕ ಗವಾಕ್ಷಿ ವ್ಯವಸ್ಥೆ ಮಾಡಿ, ಎಲ್ಲ ಇಲಾಖೆಗಳ ಅನುಮತಿ ಒಂದೇ ಕಡೆ ಸಿಗುವಂತೆ ಮಾಡಲಾಗುತ್ತಿದೆ. ಜಿಲ್ಲಾಡಳಿತದಿಂದ ಈಗಾಗಲೇ ಗಣೇಶ ಹಬ್ಬದ ಆಚರಣೆ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಆಯೋಜಕರ ವಿರುದ್ಧ ಕ್ರಮವಹಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಹೊಸ ವಿನ್ಯಾಸ ಮೂರ್ತಿಗಳಿಗೆ ಬೇಡಿಕೆ

ಚಿಕ್ಕ ಗಣೇಶ ಮೂರ್ತಿ 300ರಿಂದ 1000 ರೂ. ತನಕ ಹಾಗೂ ಒಂದು ಅಡಿಗಿಂತ ಹೆಚ್ಚು ಮೂರ್ತಿಗಳು 15000 ರೂ. ತನಕ ಹಾಗೂ ಎತ್ತರದ ಗಣೇಶ ಮೂರ್ತಿಗಳು 20ರಿಂದ 75 ಸಾವಿರ ರೂ. ತನಕ ಇದ್ದು, ನೂತನ ವಿನ್ಯಾಸದ ಗಣೇಶ ಮೂರ್ತಿಗಳಿಗೆ 1 ಲಕ್ಷ ರೂ. ತನಕ ದರ ನಿಗದಿಯಾಗಿದೆ. ಅದರಲ್ಲೂ ಹೊಸ ವಿನ್ಯಾಸದ ಮೂರ್ತಿಗಳಿಗೆ ಬೇಡಿಕೆಯಿದೆ. ಕಳೆದ ಎರಡು ದಿನಗಳಿಂದ ಯುವಕರು, ವಿವಿಧ ಗ್ರಾಮಸ್ಥರು ಬಂದು ಅಡ್ವಾನ್ಸ್​ ನೀಡಿ ಬುಕ್ಕಿಂಗ್​ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷಗಳಿಗಿಂತ ಈ ಬಾರಿ ಹೆಚ್ಚು ಗಣೇಶ ಮೂರ್ತಿಗಳು ಮಾರಾಟವಾಗುವ ನಿರೀೆಯಿದೆ ಎಂದು ವ್ಯಾಪಾರಸ್ಥ ರಂಗನಾಥ್​ ತಿಳಿಸಿದ್ದಾರೆ.

ಪಿಒಪಿ ಮೂರ್ತಿ ನಿಷೇಧ:

ಜಿಲ್ಲೆಯೂ ಆಂಧ್ರ, ತಮಿಳುನಾಡು ರಾಜ್ಯಗಗಳ ಗಡಿಯಲ್ಲಿದ್ದು, ಇಲ್ಲಿಗೆ ಹೊರರಾಜ್ಯಗಳಿಂದ ಗಣೇಶ ಮೂರ್ತಿಗಳನ್ನು ವ್ಯಾಪಾರಸ್ಥರು ತಂದು ಮಾರಾಟ ಮಾಡುವುದು ವಾಡಿಕೆಯಾಗಿದೆ. ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಇದರ ಮೇಲೆ ಜಿಲ್ಲಾಡಳಿತವು ಹದ್ದಿನ ಕಣ್ಣಿಟ್ಟಿದೆ. ಹೊರಗಿನಿಂದ ಜಿಲ್ಲೆಯೊಳಗೆ ತರಲಾಗುವ ಗಣೇಶ ಮೂರ್ತಿಗಳನ್ನು ಚೆಕ್​ ಪೋಸ್ಟ್​ಗಳಲ್ಲಿ ಪರಿಶೀಲಿಸಿಯೇ ಕಳಹಿಸಿಕೊಡಲು ಕ್ರಮವಹಿಸಲಾಗಿದ್ದು, ಅದರಂತೆ ಚೆಕ್​ ಪೋಸ್ಟ್​ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅವರು ಪರಿಶೀಲನಾ ಕಾರ್ಯ ಕೈಗೊಂಡಿದ್ದಾರೆ.

ಕೋಟ್​...

ಪರಿಸರಸ್ನೇಹಿ ಗಣೇಶ ಹಬ್ಬ ಆರಚಣೆಗೆ ಒತ್ತು ನೀಡಲಾಗಿದೆ. ಈಗಾಗಲೇ ಸಭೆ ನಡೆಸಿ ಮಾರ್ಗ ಸೂಚಿ ಹೊರಡಿಸಲಾಗಿದ್ದು, ಉಲ್ಲಂಸಿದರೆ ಕ್ರಮವಹಿಸಲಾಗುವುದು. ಮಾರಾಟ ಮಾಡಲು ತರಲಾಗಿರುವ ಈಗಾಗಲೇ ಮೂರ್ತಿಗಳನ್ನು ಪರಿಶೀಲಿಸಲಾಗುವುದು, ಪಿಒಪಿ ಕಂಡು ಬಂದರೆ ಮಾರಾಟಗಾರರ ವಿರುದ್ಧ ಕ್ರಮವಹಿಸಲಾಗುವುದು.

- ಡಾ.ರಾಜು, ಮಾಲಿನ್ಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net