ನಟ ಗಣೇಶ್ ಅಭಿನಯಿಸುತ್ತಿರುವ 41ನೇ ಚಿತ್ರಕ್ಕೆ ಇವರೇ ನಾಯಕಿ!

ವಿಜಯವಾಣಿ - 2024-01-05T160548.916
Published on

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ 41ನೇ ಸಿನಿಮಾಗೆ ಈಗಾಗಲೇ ಶೀರ್ಷಿಕೆ ಫಿಕ್ಸ್ ಆಗಿದ್ದು, 'ಕೃಷ್ಣಂ ಪ್ರಣಯ ಸಖಿ' ಎಂದು ಇಡಲಾಗಿದೆ. 'ದಂಡುಪಾಳ್ಯ' ಖ್ಯಾತಿಯ ನಿರ್ದೇಶಕ ಶ್ರೀನಿವಾಸರಾಜು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ವೆಂಕಟ್ ಪ್ರಸಾದ್ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಸಂಕಲನ ಒಳಗೊಂಡ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿದ್ದಾರೆ. ಗೋಲ್ಡನ್ ಸ್ಟಾರ್​ಗೆ ನಾಯಕಿಯಾಗಿ ಮಾಳವಿಕ ನಾಯರ್ ಕಾಣಿಸಿಕೊಂಡಿದ್ದು, ಅವರ ಹುಟ್ಟುಹಬ್ಬದಂದೇ ಚಿತ್ರತಂಡ ವಿಶೇಷ ಪೋಸ್ಟರ್​ವೊಂದನ್ನು ಬಿಡುಗಡೆಗೊಳಿಸಿ ಶುಭಾಶಯ ತಿಳಿಸಿದೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರ ತಾರಾಗಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net