ಗಾಂಧಿನಗರ ತುಳಸಿ ತೋಟದಲ್ಲಿ ಶಿವರಾತ್ರಿ ದಿನ ನಗೆ ಜಾಗರಣೆ

Dinesh Gundurao
Published on

ಬೆಂಗಳೂರು:

ಫೆ.26 ರಂದು ಮಹಾಶಿವರಾತ್ರಿ ಅಂಗವಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ತುಳಸಿತೋಟದಲ್ಲಿ ಜಾಣ-ಜಾಣೆಯರ ನಗೆ ಜಾಗರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕಲಾವಿದರಾದ ಎಂ.ಎಸ್.ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ ಗೋಪಿ, ಆಶಾ ನಾಯಕ್ ಮತ್ತಿತರರು ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಈ ಬಾರಿ ಅಂಬಾರಿ ಉತ್ಸವವನ್ನು ನಡೆಸಲಾಗುವುದು, ಆನಂದ ಗುರೂಜಿ, ಅಘೋರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

2023 ರ ವಿಧಾನಸಭೆ ಫಲಿತಾಂಶಕ್ಕೂ ಇದಕ್ಕೂ ಸಂಬಂಧ ಇಲ್ಲ. ಮೃದು ಹಿಂದುತ್ವ ಎನ್ನುವುದು ಸರಿಯಲ್ಲ. ನಾನು ಬಹಳಷ್ಟು ದೇವಸ್ಥಾನಗಳನ್ನು ನಿರ್ಮಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಮ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ಆಯೋಜಿಸುವುದು ಮೊದಲಿನಿಂದಲೂ ನಡೆದುಬಂದಿದೆ. ಮೃದು ಹಿಂದುತ್ವ ಎಂಬ ವ್ಯಾಖ್ಯಾನ ಸರಿ ಅಲ್ಲ, ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜಕೀಯ ಸಂಬಂಧ ಕಲ್ಪಿಸುವುದು ಒಳ್ಳೆಯದಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net