ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯ ಏಕತಾ ಮೂರ್ತಿ ಬಳಿ ಭೂಕಂಪನ

patel (19)
Published on

ಗಾಂಧಿನಗರ: ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಗುಜರಾತ್‍ನ ಸರ್ದಾರ್ ವಲ್ಲಬಾಯಿ ಪಟೇಲ್‍ರ ಏಕತಾ ಮೂರ್ತಿಯ ಬಳಿ ಭೂಕಂಪನ ಉಂಟಾದ ಘಟನೆ ನಡೆದಿದೆ.

ಗುಜರಾತ್‍ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಕಂಪನ ದಾಖಲಾಗಿದೆ. ಆದರೆ ಯಾವುದೇ ಸಾವು ನೋವು ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ.

ಈ ಏಕತಾ ಮೂರ್ತಿಯು ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿ.ಮೀ ದೂರದಲ್ಲಿದೆ. ಆದರೆ ಪ್ರಬಲ ಭೂಕಂಪಗಳು ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾದ ಏಕತೆಯ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net