ಮಹಾತ್ಮರು-ಮಹಾಪುರುಷರ ತತ್ವಾದರ್ಶಗಳನ್ನು ಪಾಲಿಸಿ; ಬಿ.ಪಿ. ಶಿಡೇನೂರ

2-RNR-05
Published on

ರಾಣೆಬೆನ್ನೂರ: ಮಹಾತ್ಮರು-ಮಹಾಪುರುಷರ ಆದರ್ಶಗಳನ್ನು ಅಳವಡಿಸಿಕೊಂಡು ಅವುಗಳನ್ನು ಜೀವನದಲ್ಲಿ ಪಾಲನೆ ಮಾಡಿದಲ್ಲಿ ಜಯಂತ್ಯುತ್ಸವ ಆಚರಣೆ ಸಾರ್ಥಕವಾಗುತ್ತದೆ ಎಂದು ಮುಖ್ಯಶಿಕ್ಷಕ ಬಿ.ಪಿ. ಶಿಡೇನೂರ ಹೇಳಿದರು.
ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 17ರಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಬಂಟನೂರ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಎಂಸಿ ಸದಸ್ಯರಾದ ಯಲ್ಲಪ್ಪ ಛತ್ರದ, ನಿಂಗಣ್ಣ ವಿಭೂತಿ, ಆನಂದ ಚಿನ್ನಿಕಟ್ಟಿ, ಶಿಕ್ಷಕರಾದ ವನಜಾಕ್ಷಿ ಪಾಟೀಲ, ಕೆ.ಎಸ್. ಮ್ಯಾಗೇರಿ, ಆರ್.ಬಿ. ಚಲವಾದಿ, ಪ್ರತಿಭಾ ಮೈಲಾರಕಳ್ಳಿಮಠ, ಶ್ವೇತಾ ಎಚ್.ವಿ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net