ಗಾಂಧೀಜಿ ಆದರ್ಶ ಎಲ್ಲರಿಗೂ ಮಾರ್ಗದರ್ಶಿ

gandhiji
ತರೀಕೆರೆಯಲ್ಲಿ ಏರ್ಪಡಿಸಿದ್ದ ಗಾಂಧಿ ಸ್ಮತಿ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ. ವಾಸುದೇವ್ ಉದ್ಘಾಟಿಸಿದರು. ಆರ್.ಕುಮಾರಪ್ಪ, ಟಿ.ಜೆ.ಮಂಜುನಾಥ್, ಅಸ್ಲಾಂ ಖಾನ್ ಇತರರಿದ್ದರು.
Published on

ತರೀಕೆರೆ: ಮಹಾತ್ಮ ಗಾಂಧೀಜಿ ಅವರು ಜಗತ್ತಿಗೆ ಸಾರಿದ ಅಹಿಂಸೆ ಮತ್ತು ಶಾಂತಿ ಮಂತ್ರ ಪ್ರತಿಯೊಬ್ಬರೂ ಅರಿತು ಪಾಲಿಸಬೇಕಿದೆ ಎಂದು ವಿವೇಕಾನಂದ ಪಿಯು ಕಾಲೇಜು ಪ್ರಾಚಾರ್ಯ ಡಾ. ವಾಸುದೇವ್ ಹೇಳಿದರು.
ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಾನುವಾರ ಏರ್ಪಡಿಸಿದ್ದ ಗಾಂಧಿ ಸ್ಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅಶಾಂತಿ ಮೂಡಿದ್ದು ಶಾಂತಿ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತಿದ್ದು ಈ ನಿಟ್ಟಿನಲ್ಲಿ ಹಲವು ಮದ್ಯವರ್ಜನ ಶಿಬಿರ ಆಯೋಜಿಸುತ್ತಿದೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ ಮಾತನಾಡಿ, ಗಾಂಧಿ ಕಂಡ ರಾಮರಾಜ್ಯ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸುತ್ತಿರುವ ಮದ್ಯವರ್ಜನ ಶಿಬಿರ ಪೂರಕ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ಟಿ.ಜೆ.ಮಂಜುನಾಥ್, ಮಾಜಿ ತಾಪಂ ಸದಸ್ಯ ಅಸ್ಲಾಂ ಖಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ.ಕುಸುಮಧರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net