ಮೂರು ಗಣಪತಿಗಳ ಶೋಭಾಯಾತ್ರೆ ಅ. 8ರಂದು

je721538035802367-abc
Published on

ರಾಣೆಬೆನ್ನೂರ: ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿರಾಟ ಹಿಂದೂ ಮಹಾಸಭಾ ಗಣಪತಿ, ಕಾಕಿಗಲ್ಲಿಯ ಗಣೇಶ ಹಾಗೂ ಚೌಡೇಶ್ವರಿ ದೇವಸ್ಥಾನ ಬಳಿ ಪ್ರತಿಷ್ಠಾಪನೆ ಮಾಡಿರುವ ಅನ್ನದಾತ ಗಣಪತಿ ವಿಸರ್ಜನೆ ಕಾರ್ಯಕ್ರಮ ಅ. 8ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ ಪವಾರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12 ಗಂಟೆಗೆ ನಗರದ ಅಂಚೆ ವೃತ್ತದಿಂದ ಮೂರು ಗಣಪತಿ ಮೂತಿರ್ಗಳ ಶೋಭಾಯಾತ್ರೆ ಜರುಗಲಿದೆ. ವಿವಿಧ ಕಲಾ ತಂಡಗಳು ಭಾಗಿಯಾಗಲಿವೆ. ಶೋಭಾಯಾತ್ರೆಯಲ್ಲಿ ಭಾಗಿಯಾಗುವ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಶೋಭಾಯಾತ್ರೆ ಮೆರವಣಿಗೆ ಅಂಚೆ ವೃತ್ತ, ಸಂಗಮ್​ ವೃತ್ತ, ಕುಂಬಾರ ಓಣಿ, ಸುಭಾಶ ಚೌಕ್​, ದೊಡ್ಡಪೇಟೆ, ತಳವಾರ ಗಲ್ಲಿ, ಚಕ್ಕಿಮಿಕ್ಕಿ ಸರ್ಕಲ್​, ಎಮ್​.ಜಿ.ರಸ್ತೆ, ದುರ್ಗಾ ಸರ್ಕಲ್​, ಕುರುಬಗೇರಿ ಕ್ರಾಸ್​, ಹಲಗೇರಿ ಕ್ರಾಸ್​, ಬಸ್​ ನಿಲ್ದಾಣ, ಎನ್​.ವಿ.ಹೋಟೆಲ್​ ಮೂಲಕ ಹಳೇ ಪಿ.ಬಿ.ರಸ್ತೆಯಿಂದ ತುಂಗಾಭದ್ರ ನದಿ ವಿಸರ್ಜನೆ ಮಾಡಲಾಗುವುದು. ನಗರದ ಬಸ್​ ನಿಲ್ದಾಣದಲ್ಲಿ ಬೃಹತ್​ ಮಹಾ ಮಂಗಳಾರತಿ ಹಾಗೂ ವಿಶೇಷ ಸಿಡಿಮದ್ದು ಪ್ರದರ್ಶನ ಇರುತ್ತದೆ ಎಂದು ತಿಳಿಸಿದರು.

ಪ್ರಮುಖರಾದ ಲಿಂಗರಾಜ ಬೂದನೂರು, ನಾಗರಾಜ ಸಾಲಗೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net