ಸರಸ್ವತಿ ಆರಾಧನೆಯಿಂದ ಜ್ಞಾನ ಪ್ರಾಪ್ತಿ

10-RPT-3
ರಿಪ್ಪನ್‌ಪೇಟೆ ಹೊಂಬುಜ ಜೈನಮಠದಲ್ಲಿ ಶರನ್ನವರಾತ್ರಿ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ರಿಪ್ಪನ್‌ಪೇಟೆ: ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಜೀವನದಲ್ಲಿ ಸಂಕಷ್ಟಗಳು ಎದುರಾಗುವುದಿಲ್ಲ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅಧಿದೇವತೆ ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಕ್ತಿ, ಶ್ರದ್ಧೆಯಿಂದ ವಿದ್ಯಾದೇವಿ ಶ್ರೀ ಸರಸ್ವತಿ ಮಾತೆ ನಾಮಸ್ಮರಣೆ ಮಾಡುವುದರಿಂದ ಸುಲಲಿತವಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ. ಸಂಸ್ಕಾರಯುತ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.

ಶರನ್ನವರಾತ್ರಿ ಉತ್ಸವ, ಪೂಜೆ ನಿಮಿತ್ತ ಹೊಂಬುಜ ಅತಿಶಯ ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿಯಲ್ಲಿ ಪೂಜೆ ಮಾಡಲಾಯಿತು. ಆರ್ಯಿಕಾರತ್ನ ಶ್ರೀ ಶಿವಮತಿ ಮಾತಾಜಿ ಅವರು ವಿದ್ಯಾಶ್ರೀ ಸರಸ್ವತಿ ದೇವಿ ಸ್ತ್ರೋತ್ರ ಸ್ತುತಿಸಿದರು. ಭಕ್ತರು ಫಲ-ಪುಷ್ಪಗಳನ್ನು ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net