

ಮುಂಬೈ: ಆಗಸ್ಟ್ 11 ರಂದು ಅದ್ದೂರಿಯಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸನ್ನಿ ಡಿಯೋಲ್ ನಟನೆಯ 'ಗದರ್ 2' ಈ ಹಿಂದಿನ ಸಿನಿಮಾಗಳು ನಿರ್ಮಿಸಿದ್ದ ದಾಖಲೆಗಳನ್ನು ಮುರಿಯುವಲ್ಲಿ ಇದೀಗ ಯಶಸ್ವಿಯಾಗಿದೆ.
ಇದನ್ನೂ ಓದಿ: ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ
ಭಾರತೀಯ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿರುವ 'ಗದರ್ 2', ಎರಡನೇ ವಾರಾಂತ್ಯದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ. ಬಾಲಿವುಡ್ ಸಿನಿಮಾಗಳಲ್ಲಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ ಈ ಚಿತ್ರ, ಅಮೀರ್ ಖಾನ್ ನಟನೆಯ ದಂಗಲ್ ಮಾಡಿದ್ದ ಒಟ್ಟು ಗಳಿಕೆಯನ್ನು ಇದೀಗ ಬ್ರೇಕ್ ಮಾಡಿದೆ.
ಕೇವಲ ಸೋಮವಾರ ಒಂದೇ ದಿನ 'ಗದರ್ 2' 13.5 ಕೋಟಿ ರೂ. ಕಲೆಕ್ಷನ್ ಮಾಡುವ ಮುಖೇನ ಒಟ್ಟು 388 ಕೋಟಿ ರೂ. ಗಳಿಕೆಯನ್ನು ತಲುಪಿದೆ. ಸನ್ನಿ ಡಿಯೋಲ್ ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಚಿತ್ರ ಇದೇ ರೀತಿ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಆದ್ರೆ, ಈ ವಾರ ಆಯುಷ್ಮಾನ್ ಖುರಾನಾ ಅವರ 'ಡ್ರೀಮ್ ಗರ್ಲ್ 2' ಸೇರಿದಂತೆ ಹಲವು ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಇದರಿಂದ ಗದರ್ 2 ಕಲೆಕ್ಷನ್ ವೇಗಕ್ಕೆ ಬ್ರೇಕ್ ಬೀಳಬಹುದು ಎಂದು ಹಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).