ಗದಗದಲ್ಲಿ ಡೆಂಘೀಗೆ 5 ವರ್ಷದ ಬಾಲಕ ಮೊದಲ ಬಲಿ

Gadag district A 5-year-old boy end life of dengue without treatment
Published on

ಗದಗ: ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.ಡೆಂಘೀ ಅಬ್ಬರಕ್ಕೆ  ಗದಗ ಜಿಲ್ಲೆಯಲ್ಲಿ ಡೆಂಘೀಗೆ ಮೊದಲ ಬಲಿಯಾಗಿದೆ.

ಚಿರಾಯಿ ಹೊಸಮನಿ (5) ಮೃತ ಬಾಲಕ. ಚಿಕಿತ್ಸೆ ಫಲಿಸದೆ ಡೆಂಘೀ ಗೆ 5 ವರ್ಷದ ಬಾಲಕ ಸಾವು. ಗದಗ ತಾಲೂಕಿನ ಶಿರುಂಜ ಗ್ರಾಮದ ಬಾಲಕ.

ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ದಾಖಲಾಗಿತ್ತು.

ಕಳೆದ ಒಂದುವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕ. ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಇಂದು ಧಾರವಾಡ ಆಸ್ಪತ್ರೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net