ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ವಿದೇಶಿ ಪ್ರತಿನಿಧಿಗಳ ಉಪಾಹಾರಕ್ಕೆ ಆಯುರ್ವೇದ ಆಹಾರ

g20
Published on

ನವದೆಹಲಿ: ನವದೆಹಲಿಯ ಲೆ ಮೆರಿಡಿಯನ್ ಹೋಟೆಲ್ ಜಿ20 (The Group of Twenty) ಕಾರ್ಯಕ್ರಮಕ್ಕೆ ಬರುವ ಪ್ರತಿನಿಧಿಗಳಿಗೆ ಆತಿಥ್ಯ ನೀಡಲು ಸಿದ್ಧವಾಗಿದೆ. ಹೋಟೆಲ್ ತನ್ನ ಅತಿಥಿಗಳಿಗೆ ಉತ್ತಮ ಹಾಗೂ ಆರೋಗ್ಯಕರವಾದ ತಿನಿಸುಗಳನ್ನು ನೀಡಲಿದೆ.

ಭಾರತದ ಸಾಂಸ್ಕೃತಿಕ ಹಾಗೂ ಪ್ರಾದೇಶಿವ ವೈವಿಧ್ಯತೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಿ-20 ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಂಡಿದೆ.

G-20 ಶೃಂಗಸಭೆಗಾಗಿ ಪ್ರಪಂಚದಾದ್ಯಂತದ ಅತಿಥಿಗಳು ದೇಶದ ರಾಜಧಾನಿ ದೆಹಲಿಗೆ ಬರುತ್ತಿದ್ದಾರೆ. ಸೆ.7ರಿಂದ ವಿಶೇಷ ಅತಿಥಿಗಳ ಕೂಟವೂ ಆರಂಭವಾಗಲಿದೆ. ಭದ್ರತಾ ವ್ಯವಸ್ಥೆಗಳು ಭರದಿಂದ ನಡೆಯುತ್ತಿದ್ದರೆ, ರಾಜಧಾನಿಯ ದೊಡ್ಡ ಹೋಟೆಲ್‌ಗಳು ಸಹ ಅತಿಥಿಗಳನ್ನು ಸ್ವಾಗತಿಸಲು ತಮ್ಮ ಸಿದ್ಧತೆಯಲ್ಲಿ ಯಾವುದೇ ಲೋಪದೋಷವಾಗದಂತೆ ನೋಡಿಕೊಳ್ಳುತ್ತಿವೆ.

ಬೆಳಗಿನ ಉಪಾಹಾರದಲ್ಲಿನ ಆಯುರ್ವೇದ ಆಹಾರದಿಂದ ಹಿಡಿದು ಸ್ಥಳೀಯ ಪದಾರ್ಥಗಳಿಂದ ಮಾಡಿದ ಜಾಗತಿಕ ಪಾಕಪದ್ಧತಿಗಳವರೆಗೆ ಪ್ರಾದೇಶಿಕ ಆಹಾರದವರೆಗೆ, ಪಟ್ಟಿಯು ವಿದೇಶಿ ಪ್ರತಿನಿಧಿಗಳಿಗೆ ಅತ್ಯುತ್ತಮವಾದ ಆಹಾರ ಆಯ್ಕೆಗಳನ್ನು ಒಳಗೊಂಡಿದೆ.

ಮೆನು ಕುರಿತು ಮಾತನಾಡಿದ ಹೋಟೆಲ್‌ನ ಮುಖ್ಯ ಬಾಣಸಿಗ ದೇವಿಂದರ್ ಕುಮಾರ್, ''ಆಹಾರದಲ್ಲಿ ಅದ್ಭುತವಾದ ಸ್ಪ್ರೆಡ್ ಅನ್ನು ನೀಡಲಾಗುತ್ತಿದೆ. ನಮ್ಮ ಅತಿಥಿಗಳಿಗಾಗಿ ವಿಶೇಷ ಮೆನುವನ್ನು ರಚಿಸಲಾಗಿದೆ. ನಾವು ಸಂಪೂರ್ಣ ಅಧಿಕೃತ ಪಾಕವಿಧಾನಗಳನ್ನು ಬಳಸಿಕೊಂಡು ಸ್ಥಳೀಯ ಪದಾರ್ಥಗಳಿಂದ ಮಾಡಿದ ಜಾಗತಿಕ ಪಾಕಪದ್ಧತಿಯನ್ನು ನೀಡುತ್ತೇವೆ ಎಂದಿದ್ದಾರೆ.

ಈ ಜಾಗತಿಕ ಸನ್ನಿವೇಶದಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿರುವ 43 ದೇಶಗಳಿಗೆ ದೆಹಲಿ ಆತಿಥ್ಯವಹಿಸಲಿದ್ದು, ದೆಹಲಿ ನಗರದಲ್ಲಿ ಅಗತ್ಯಕ್ಕನುಸಾರವಾಗಿ ಕೆಲವೊಂದು ತಾತ್ಕಾಲಿಕ ಕಟ್ಟುಪಾಡುಗಳನ್ನು ಸಿದ್ಧಗೊಳಿಸಿದೆ. ಅವುಗಳಲ್ಲಿ ಟ್ರಾಫಿಕ್‌ನ ಸೂಚನೆಗಳಲ್ಲಿನ ಮಾದರಿಗಳ ಬದಲಾವಣೆಗಳು, ಅದರೊಂದಿಗೆ ತಯಾರಿಗೆ ಅವಶ್ಯಕ ಸರಕು ಮತ್ತು ಸೇವೆಗಳಿಗೂ ಏರ್ಪಾಡು ನಡೆಯುತ್ತಿದೆ.

ಜಿ 20ಯಲ್ಲಿ ಎಲ್ಲಾ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ 60 ನಗರಗಳಲ್ಲಿ 220 ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ ಮತ್ತು ಸುಮಾರು 125 ರಾಷ್ಟ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಹಾಗೂ ಭಾರತೀಯರ ಕೌಶಲ್ಯಗಳನ್ನು ವೀಕ್ಷಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net