ಭಾರತದ ಆರ್ಥಿಕ ಬೆನ್ನೆಲುಬಾಗಿರುವ ಆದಾಯ ತೆರಿಗೆ ವ್ಯವಸ್ಥೆಯು ದೀರ್ಘ ಇತಿಹಾಸವನ್ನು ಹೊಂದಿದೆ. ದೇಶದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರಗಳ ಅಭಿವೃದ್ಧಿಗೆ ತೆರಿಗೆದಾರರು ನೀಡುವ ಕೊಡುಗೆ ನಿಜಕ್ಕೂ ಅನನ್ಯ. ಆದಾಯ ತೆರಿಗೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 24ರಂದು ದೇಶಾದ್ಯಂತ "ಆದಾಯ ತೆರಿಗೆ ದಿನ" ಆಚರಿಸಲಾಗುತ್ತದೆ. ರಾಷ್ಟ್ರದ ಅಭಿವೃದ್ಧಿಗೆ, ಆರ್ಥಿಕತೆಯ ಬೆಳವಣಿಗೆಗೆ ತೆರಿಗೆದಾರರ ಕೊಡುಗೆ ಎಷ್ಟು ಮುಖ್ಯ ಎಂಬುದನ್ನು ಪುನರ್ಮನನ ಮಾಡುವ ದಿನವಿದು. ಈ ನಿಮಿತ್ತ ಆದಾಯ ತೆರಿಗೆಯ ಇತಿಹಾಸ, ಇತ್ತೀಚಿನ ಬದಲಾವಣೆ & ಸುಧಾರಣೆಗಳ ಕುರಿತಾದ ವಿವರ ಇಲ್ಲಿದೆ.