ಜ.24ರಿಂದ ಫ್ರೀಡಂ ಪಾರ್ಕ್ ನಲ್ಲಿ ಫಲ-ಪುಷ್ಪ ಸಿರಿ ಪ್ರದರ್ಶನ

flower show
ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ 4.80 ಲಕ್ಷ ಹೂವುಗಳನ್ನು ಬಳಸಿ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಮನೆ ಮಾದರಿ ನಿರ್ಮಿಸುತ್ತಿರುವುದು.
Published on

ಶಿವಮೊಗ್ಗ: ರೈತರು ಬೆಳೆದ ಫಲ-ಪುಷ್ಪ-ಬೆಳೆಗಳು ಹಾಗೂ ಮಹಿಳೆಯರು ತಯಾರಿಸಿದ, ಕಣ್ಮನ ಸೆಳೆಯುವ ಮಲೆನಾಡ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಗರದ ಫ್ರೀಡಂ ಪಾರ್ಕ್ ಸಜ್ಜಾಗಿದೆ.

ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಜ.24ರಿಂದ ಮೂರು ದಿನ ಬೃಹತ್ ಮತ್ತು ಆಕರ್ಷಣೀಯ ಫಲ-ಪುಷ್ಪ ಪ್ರದರ್ಶನ ಮತ್ತು ವಿಶೇಷವಾದ ಮಲೆನಾಡ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಶಿವಮೊಗ್ಗ ಜಿಪಂ ಕ್ರಾಫ್ಟ್ ಆಫ್ ಮಲೆನಾಡು ಎಂಬ ಬ್ರಾೃಂಡ್ ಮೂಲಕ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಂದು ಬೃಹತ್ ಅವಕಾಶ ಕಲ್ಪಿಸಿದೆ. ಹಸೆ ಚಿತ್ತಾರ, ಗೃಹಾಲಂಕಾರ ಉತ್ಪನ್ನಗಳು, ಟೆರಾಕೊಟ, ಕುಂಬಾರಿಕೆ, ಸಿಛ್ಛಈ ಉಡುಪು, ತಿನಿಸು ಪದಾರ್ಥಗಳು ಇತ್ಯಾದಿ ಉತ್ಪನ್ನಗಳ ಮಾರಾಟ ಮಾಡಲಾಗುವುದು. 75ನೇ ಗಣರಾಜ್ಯೋತ್ಸವದ ಅಂಗವಾಗಿ ಜ.24ರಿಂದ 26ರ ಬೆಳಗ್ಗೆ 9ರಿಂದ ರಾತ್ರಿ 9ರವರಗೆ ಪುಷ್ಪಸಿರಿ ಹೆಸರಿನ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು.

ಮೊದಲ ಹಂತದಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮೇಳ ಆಯೋಜನೆ, ಎರಡನೇ ಹಂತದಲ್ಲಿ ವೆಬ್‌ಸೈಟ್ ಸಿದ್ಧಪಡಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಹಾಗೂ ಮೂರನೇ ಹಂತದಲ್ಲಿ ಇವರ ಉತ್ಪನ್ನಗಳ ಮಾರಾಟಕ್ಕೆ ಸ್ಟೋರ್ ತೆರೆಯುವ ಯೋಜನೆ ಇದೆ. -ಎನ್.ಹೇಮಂತ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net