

ಬೆಂಗಳೂರು: ಶ್ರೇಷ್ಠ ಸಂಬಂಧವೊಂದರಲ್ಲಿ ಸ್ನೇಹ ಸಂಬಂಧ ಉತ್ತಮವಾದ ಬಂಧವಾಗಿದೆ. ಸ್ನೇಹದಲ್ಲಿ ಸ್ವಾರ್ಥ, ನಾನು ನನ್ನದು ಎನ್ನುವ ಅಹಂಭಾವ ಇರೋದಿಲ್ಲ. ಸ್ನೇಹ ಎಂದರೆ ನಾವೆಲ್ಲರೂ, ನಮ್ಮದು ಎನ್ನುವ ಸುಂದರ ಭಾವ. ಯಾವುದೇ ನೀರಿಕ್ಷೆ ಇಲ್ಲದೆ ಇರುವ ಕಾಳಜಿ, ಪ್ರೀತಿಯೇ ಶುದ್ಧವಾದ ಸ್ನೇಹವಾಗಿದೆ. ನಿಜವಾದ ಸ್ನೇಹಿತ ಪ್ರತಿ ಬಾರಿಯೂ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ನಿಜವಾದ ಸ್ನೇಹವನ್ನು ಸಾಧಿಸುವುದು ನಿಜವಾದ ಕೊಡುಗೆಯಾಗಿದೆ. ಇಂತಹ ವಿಶೇಷವಾದ ದಿನದ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.
ಸ್ನೇಹಿತರ ದಿನದ ಇತಿಹಾಸ: 20ನೇ ಶತಮಾನದ ಆರಂಭದಲ್ಲಿ ಹಾಲ್‌ಮಾರ್ಕ್ ಕಾರ್ಡ್‌ಗಳ ಸೃಷ್ಟಿಕರ್ತ ಜಾಯ್ಸ್ ಹಾಲ್ ಸ್ನೇಹವನ್ನು ಸ್ಮರಿಸಲು ಒಂದು ದಿನ ಬೇಕು ಎಂಬ ಉದ್ದೇಶದಿಂದ ಈ ದಿನದ ಆಚರಣೆ ಕುರಿತಾಗಿ ಹೇಳಿದರು. ಇದು ಅಂತರರಾಷ್ಟ್ರೀಯ ಸ್ನೇಹಿತರ ದಿನವಾಗಿ ಮುಂದುವರಿಯಿತು. ಮತ್ತೊಂದು ಇತಿಹಾಸದ ಪ್ರಕಾರ, ಫ್ರೆಂಡ್‌ಶಿಪ್ ಡೇ ಪರಿಕಲ್ಪನೆಯನ್ನು ಮೊದಲು 1958ರಲ್ಲಿ ಪರುಗ್ವೆಯಲ್ಲಿ ಪ್ರಸ್ತಾಪಿಸಲಾಯಿತು. ಅಂದಿನಿಂದ ಈ ದಿನವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಿತು ಮತ್ತು 1997ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು. 2011ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇಂಟರ್‌ನ್ಯಾಷನಲ್ ಡೇ ಆಫ್ ಫ್ರೆಂಡ್‌ಶಿಪ್ ಅನ್ನು ಘೋಷಿಸಿತ್ತು. ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಕೆಲವು ದೇಶಗಳಲ್ಲಿ ಜುಲೈ 30 ರಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ. ಹೀಗೆ ಸ್ನೇಹಿತರ ದಿನಕ್ಕೆ ಒಂದೊಂದು ಇತಿಹಾಸವಿದೆ. ಅಲ್ಲದೇ ಅನೇಕ ದೇಶಗಳು ವಿಭಿನ್ನ ದಿನಾಂಕಗಳಲ್ಲಿ ಫ್ರೆಂಡ್‌ಶಿಪ್ ಡೇ ಅನ್ನು ಆಚರಿಸಲು ಪ್ರಾರಂಭಿಸಿದವು. ಆದರೆ ಏನೇ ಇರಲಿ ಈ ದಿನ ಗೆಳಯ, ಗೆಳತಿಯರ ಪಾಲಿಗೆ ವಿಶೇಷ ಮತ್ತು ವಿಭಿನ್ನವಾಗಿದೆ.
ಸ್ನೇಹಿತರ ದಿನ ಯಾವಾಗಾ?: ಪ್ರತಿವರ್ಷ ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಜುಲೈ 30 ರಂದು ಈ ದಿನವನ್ನು ಆಚರಿಸುತ್ತಾರೆ. ಅಮೆರಿಕ, ಯುಎಇ, ಭಾರತ, ಬಾಂಗ್ಲಾ ಮುಂತಾದ ಕಡೆಗಳಲ್ಲಿ ಆಗಸ್ಟ್ ಮೊದಲ ಭಾನುವಾರ ಇಂಟರ್‌ನ್ಯಾಷನಲ್ ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತದೆ. ಸ್ನೇಹಿತರ ದಿನವನ್ನು (ಆಗಸ್ಟ್ 6) ಸಲೆಬ್ರೆಟ್ ಮಾಡಲಾಗುತ್ತದೆ.
ʼಸ್ನೇಹದ ಮೂಲಕ ಮಾನವ ಚೈತನ್ಯವನ್ನು ಹಂಚಿಕೊಳ್ಳಿʼ ಎಂದು 2023ರ ಸ್ನೇಹಿತರ ದಿನದ ಥೀಮ್ ಆಗಿದೆ. ಇದು ವ್ಯಕ್ತಿಗಳ ನಡುವೆ ಅರ್ಥಪೂರ್ಣ ಸಂಪರ್ಕ ಮತ್ತು ಸೌಹಾರ್ದತೆ ಬೆಳಸುವ ಉದ್ದೇಶವನ್ನು ಹೊಂದಿದೆ.
ಎಲ್ಲರೂ ತಮ್ಮ ಅಚ್ಚುಮೆಚ್ಚಿನ ಸ್ನೇಹಿತರಿಗೆ ಏನಾದರೂ ಉಡುಗೊರೆ ನೀಡಿ, ಸ್ನೇಹಿತರ ಜತೆ ಸಮಯ ಕಳೆಯಿರಿ ಅಥವಾ ನಿಮಗೆ ಇಷ್ವವಾದ ಜಾಗಕ್ಕೆ ತೆರಳಿ, ಇಬ್ಬರು ಉಡುಗೊರೆಯನ್ನು ವಿನಿಮಯ ಮಾಡಿಕೊಂಡು ಈ ದಿನವನ್ನು ವಿಶೇಷವಾಗಿ ಸೆಲೆಬ್ರೆಟ್ ಮಾಡಿ.