ಗೆಳೆಯಾ..ನಿನ್ನ ಮರೆಯಲಾರೆವು..! ಸಮಾಧಿ ಬಳಿ ಮೃತ ಸ್ನೇಹಿತನ ಹುಟ್ಟುಹಬ್ಬ ಆಚರಿಸಿದ ಯುವಕರು

friendscelebratebirthday
Published on

ತೆಲಂಗಾಂಣ: ಬದುಕಿರುವ ಜನರನ್ನು ಮರೆತಂತೆ ನಟಿಸುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲೊಂದು ಸ್ನೇಹಿತರ ಗುಂಪು ಗೆಳೆಯ ಕೊನೆಯುಸಿರೆಳೆದರೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾನೆಂದು ಯುವಕರು ತಮ್ಮ ಮೃತ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಜಗಿತ್ಯಾಲ ಜಿಲ್ಲೆಯ ಮೇಡಿಪಲ್ಲಿ ಮಂಡಲದ ಭೀಮಾರಂ ಗ್ರಾಮದ ಮೋಹಿನ್ ಖಾನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಯಲ್ಲಿ ಆಟವಾಡುತ್ತಿದ್ದ ಬಾಲ್ಯದ ಗೆಳೆಯ ಬಾರದ ಲೋಕಕ್ಕೆ ಹೋಗಿದ್ದರು ಮೋಹಿನ್ ಖಾನ್ ಜತೆ ಕಳೆದ ಮಧುರ ನೆನಪುಗಳನ್ನು ಅವರ ಗೆಳೆಯರು ಮಾತ್ರ ಮರೆತಿಲ್ಲ.

ಮೃತ ಮೊಹಿನ್ ಖಾನ್ ಅವರ ಜನ್ಮದಿನವಾದ್ದರಿಂದ ಆತನ ಸ್ನೇಹಿತರು ಭೀಮಾರಾಮ್ ಗ್ರಾಮದ ವಿವಿಧೆಡೆ ಜನ್ಮದಿನದ ಶುಭಾಶಯಗಳನ್ನು ಏರ್ಪಡಿಸಲಾಗಿತ್ತು. ಮೊಹಿನ್ ಖಾನ್ ಸಮಾಧಿಯನ್ನು ಅಲಂಕರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಬದುಕಿರುವ ಜನರನ್ನು ಮರೆತಂತೆ ನಟಿಸುತ್ತಿರುವ ಈ ಕಾಲಘಟ್ಟದಲ್ಲಿ ಭೀಮಾರಾಮದ ಯುವಕರು ಮೃತ ಗೆಳೆಯನ ಹುಟ್ಟುಹಬ್ಬ ಆಚರಿಸಿ ಮಾನವೀಯತೆ ಮೆರೆದರು.

'ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ನಮ್ಮ ಹೃದಯದಲ್ಲಿ ಚಿರಸ್ಥಾಯಿಯಾಗಿರುವೆ ಗೆಳೆಯಾ..ಮೋಹಿನ್ ಖಾನ್ ಅವರ ಸ್ನೇಹಿತರು. ನಿನ್ನ ಬದುಕನ್ನು ಆಳಿದ ಸಾವು ನಮ್ಮ ಸ್ನೇಹದ ಸಿಹಿ ಗುರುತುಗಳನ್ನು ಆಳಲು ಸಾಧ್ಯವಿಲ್ಲ. ಕೊನೆಯುಸಿರೆಳೆದರೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದೀರಿ' ಎಂದು ಯುವಕರು ತಮ್ಮ ಮೃತ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net