

ಬೆಟ್ಟದಪುರ: ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದವತಿಯಿಂದ ಫ್ರೈಡೆ-ಡ್ರ್ರ್ರೈೆಡೇ ಕಾರ್ಯಕ್ರಮದ ಜಾಥಾ ಇತ್ತೀಚೆಗೆ ನಡೆಯಿತು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸುರಕ್ಷತಾಧಿಕಾರಿಗಳು ಪ್ರತಿ ಮನೆ-ಮನೆಗೆ ಭೇಟಿ ನೀಡಿ ನೀರು ನಿಲ್ಲುವ ತ್ಯಾಜ್ಯಗಳನ್ನು ತೆರವುಗೊಳಿಸಿ, ಸ್ವಯಂ ರಕ್ಷಣಾ ಹಾಗೂ ಡೆಂೆ ನಿಯಂತ್ರಣದ ಕುರಿತು ಜಾಗೃತಿ ಭಿತ್ತಿ ಪತ್ರಗಳನ್ನು ಹಂಚಿದರು.
ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವೈದ್ಯಾಧಿಕಾರಿ ಡಾ.ಪೂಜಾ, ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಿಯಂತ್ರಿಸಲು ಪ್ರತಿ ಶುಕ್ರವಾರ ಫ್ರೈಡೆ ಡ್ರೈ ಡೇ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಟ್ಟದಪುರದಲ್ಲಿ ಎರಡು ಡೆಂಘೆ ಪ್ರಕರಣಗಳಿರುವುದರಿಂದ ಸಾರ್ವಜನಿಕರಲ್ಲಿ ಮುಂಜಾಗ್ರತಾ ಕ್ರಮವಹಿಸಲು ಈ ಕ್ರಮ ಅನುಸರಿಸಲಾಗುತ್ತದೆ. ಎಲ್ಲ ನೀರಿನ ಸಾಧನಗಳು, ತೊಟ್ಟಿಗಳು, ಡ್ರಮ್‌ಗಳು, ಏರ್‌ಕೂಲರ್ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ ಒಣಗಿಸಿ ನಂತರ ನೀರು ತುಂಬಿಸಬೇಕು ಎಂದರು.
ಆರೋಗ್ಯ ನಿರೀಕ್ಷಕ ಕುಮಾರ್ ಪೊನ್ನಪ್ಪ, ಸುರಕ್ಷತಾಧಿಕಾರಿ ದೇವಕಿ, ಶಿಕ್ಷಕ ಗೊರಳ್ಳಿ ಜಗದೀಶ್, ಕೆಂಪರಾಜ್ ಇತರರು ಇದ್ದರು.