ಕೇವಲ 12 ನಿಮಿಷಗಳಲ್ಲಿ ಐಫೆಲ್​ ಟವರ್​ ಏರಿ ದಾಖಲೆ ಬರೆದ ಸೈಕ್ಲಿಸ್ಟ್​ ಆರೆಲಿಯನ್ ಫಾಂಟೆನಾಯ್! | Eiffel Tower

untitled-design-2025-10-07t122626155-68e4b9a1ce3ca (1)
Published on

Eiffel Tower : ಫ್ರೆಂಚ್​ ಸೈಕ್ಲಿಸ್ಟ್​ ಆರೆಲಿಯನ್ ಫಾಂಟೆನಾಯ್ ಆಲ್-ಟೆರೈನ್ ಬೈಕ್‌ನಲ್ಲಿ ಐಫೆಲ್ ಟವರ್‌ನ 2 ನೇ ಮಹಡಿಯನ್ನು ವೇಗವಾಗಿ ತಲುಪುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಸುದ್ದಿಮೂಲಗಳ ಪ್ರಕಾರ, ಫಾಂಟೆನಾಯ್​ ಪ್ಯಾರಿಸ್​ ಹೆಗ್ಗುರುತಿನ 686 ಮೆಟ್ಟಿಲುಗಳನ್ನು ಕೇವಲ 12 ನಿಮಿಷ 30 ಸೆಕೆಂಡುಗಳಲ್ಲಿ ಏರಿದ್ದಾರೆ. ಅವರು 2 ದಶಕಗಳ ಹಿಂದಿನ ದಾಖಲೆಯನ್ನು ಸುಮಾರು 7 ನಿಮಿಷಗಳ ಅಂತರದಲ್ಲಿ ಮುರಿದಿದ್ದಾರೆ ಎಂದು ಐಫೆಲ್ ಟವರ್‌ನ ನಿರ್ವಾಹಕ ಸೊಸೈಟೆ ಡಿ ಎಕ್ಸ್‌ಪ್ಲೋಯಿಟೇಶನ್ ಡೆ ಲಾ ಟೂರ್ ಐಫೆಲ್ ಶುಕ್ರವಾರ ತಿಳಿಸಿದ್ದಾರೆ.

ಆರೆಲಿಯನ್ ಫಾಂಟೆನಾಯ್ ಹೇಳಿದ್ದೇನು?

ಫಾಂಟೆನಾಯ್​ (35) ನಾನು ಮಾಡಿದ ದಾಖಲೆಯನ್ನು ಪುನಃ ಬ್ರೇಕ್​ ಮಾಡುತ್ತೇನೆ. ನನ್ನ ಟೈರ್​ ಅನ್ನು ಕಂಪ್ರೆಸ್​ ಮಾಡಬೇಕಾಗಿತ್ತು. ಏಕೆಂದರೆ ನನ್ನ ಬಳಿ ಸಸ್ಪೆಷನ್​ ಏನೂ ಇಲ್ಲ. ಇದು ಕೇವಲ ರಿಜಿಡ್​ ಬೈಕ್​ ಆದರಿಂದ ನಾವು ಬ್ರೇಕ್​ನೊಂದಿಗೆ ಪಂಪ್​ ಮಾಡಿ ಬಹಳಷ್ಟು ಜಿಗಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಶಕ್ತಿ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಅತಿಯಾದ ಜಿಮ್ ಅವಧಿಗಳು ಮತ್ತು ಜಂಪ್ ರೋಪ್ ತರಬೇತಿಯನ್ನು ಪಡೆದಿದ್ದು, ಮೆಟ್ಟಿಲು ಹತ್ತುವ ತಯಾರಿ ನಡೆಸಲು ತಿಂಗಳುಗಳನ್ನು ಕಳೆದಿದ್ದೇನೆ. ಆದರೆ ದಾಖಲೆ ಪ್ರಯತ್ನವು ವರ್ಷಗಳ ಕಾಲ ಬೇಕಾಯಿತು ಎಂದು ಫಾಂಟೆನಾಯ್ ಹೇಳಿದರು.

ಬಹುಶಃ ಇದು ನಾನು ಮೂರು ಅಥವಾ ನಾಲ್ಕು ವರ್ಷಗಳ ಹಿಂದೆಯೇ ನಿರ್ಧರಿಸಿದ್ದ ಸವಾಲಾಗಿತ್ತು. 4 ವರ್ಷಗಳ ಹಿಂದೆ ಟೂರ್​ ಟ್ರಿನಿಟಿ ಪ್ರಾರಂಭಿಸಿದೆ. ನಂತರ ನಾನು ಐಫೆಲ್​ ಟವರ್​ಗೆ ಹೋಗಬೇಕಾಗಿತ್ತು, ಆದರೆ ಕೋವಿಡ್-19 ಸಮಯದಲ್ಲಿ ಈ ತೀರ್ಮಾನವನ್ನು ಅಲ್ಲಿಯೇ ಕೈಬಿಡಲಾಯಿತು ಎಂದು ತಿಳಿಸಿದರು.

ಹಿನ್ನಲೆ

5 ವರ್ಷಗಳ ಹಿಂದೆ ಸ್ಪರ್ಧಾತ್ಮಕ ಪರ್ವತ ಬೈಕ್ ರೇಸಿಂಗ್‌ನಿಂದ ಫಾಂಟೆನಾಯ್ ನಿವೃತ್ತಿ ಹೊಂದಿದ್ದರು. ಈ ಆಕರ್ಷಕ ವಿಶ್ವ ದಾಖಲೆಯ ಪ್ರಯತ್ನಗಳು ತಮ್ಮನ್ನು ತಾವು ಸವಾಲು ಮಾಡಿಕೊಳ್ಳುವುದನ್ನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net