

ಸ್ಪೇನ್: ಸಾರ್ವಜನಿಕರಿಗಾಗಿ ಇದೇ ಮೊದಲ ಬಾರಿ ಈ ದೇಶ ದೊಡ್ಡ ಮಟ್ಟದ ನಿರ್ಧಾರವನ್ನು ಕೈಗೊಂಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಕಾರಣವನ್ನೂ ತಿಳಿಸಿದೆ.
ಅದುವೇ ಸ್ಪೇನ್ ದೇಶ ಸಾರ್ವಜನಿಕರಿಗೆ ರೈಲು ಪ್ರಯಾಣ ಸಂಪೂರ್ಣ ಉಚಿತ ಎಂದು ಘೋಷಣೆ ಮಾಡಿದೆ. ದೇಶದ ಯಾವುದೇ ಭಾಗದಲ್ಲಿ ಎಷ್ಟು ದೂರ ಪ್ರಯಾಣ ಮಾಡಿದರೂ ಸಂಪೂರ್ಣ ಉಚಿತ. ಇದಕ್ಕೆ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಟಿಕೆಟ್ ಇಲ್ಲದೇಯೇ ನೀವು ಪ್ರಯಾಣಿಸಬಹುದು ಎಂದು ಹೇಳಿದೆ.
ಆದರೆ ಈ ಘೋಷಣೆ ಜಾರಿಯಾಗುವುದು ಮಾತ್ರ ಸ್ವಲ್ಪ ತಡವಾಗಿ. ಅಂದರೆ ಸೆಪ್ಟಂಬರ್ ತಿಂಗಳಿನಿಂದ ಇಲ್ಲಿನ ಸಾರ್ವಜನಿಕರು ಇದರ ಲಾಭ ಪಡೆಯಲಿದ್ದಾರೆ. ಇದು ಸೀಮಿತ ಅವಧಿಗೆ ಮಾತ್ರ ಇದ್ದು, ಇದೇ ವರ್ಷ ಅಂದರೆ 2022ರ ಡಿಸೆಂಬರ್ ಅಂತ್ಯದವರೆಗೆ ಮಾತ್ರ ಅನ್ವಯಿಸಲಿದೆ.
ಇದಕ್ಕೆ ಕಾರಣವೂ ನೀಡಿರುವ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ, ಸಾರ್ವಜನಿಕರ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಇನ್ನು ಈ ರೀತಿಯ ನಿರ್ಧಾರ ಕೈಗೊಂಡಿರುವ ಯುರೋಪ್ ರಾಷ್ಟ್ರಗಳಲ್ಲಿ ಸ್ಪೇನ್ ಮೊದಲೇನಲ್ಲ. ಸ್ಪೇನ್ ಹೊರತಾಗಿ ಜರ್ಮನಿ ಕೂಡ ಆಗ್ಗಾಗ್ಗೆ ಸಾರ್ವಜನಿಕರಿಗೆ ಈ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಈ ಸೌಲಭ್ಯ ಪಡೆಯಲು ಈ ದೇಶದ ಪ್ರಜೆಯೇ ಆಗಿರಬೇಕು. ಇವರಿಗೆ ನೀಡಲಾಗುವ ಉಚಿತ ಟಿಕೆಟನ್ನು ತೋರಿಸಿ ಎಲ್ಲೆಂದರಲ್ಲಿ ಪ್ರಯಾಣಿಸಬಹುದಾಗಿದೆ. (ಏಜೆನ್ಸೀಸ್)