ಉಚಿತ ಅಕ್ಕಿ ವಿತರಿಸುವ ಎಟಿಎಂ

sudina 3
Published on

ನವದೆಹಲಿ: ಜಗತ್ತಿನ ಬಹುತೇಕ ದೇಶಗಳಲ್ಲಿ ಈಗ ಲಾಕ್​ಡೌನ್ ಘೊಷಣೆಯಾಗಿದೆ. ಈ ಸಂದರ್ಭದಲ್ಲಿ ಎಷ್ಟೋ ಜನ ಉದ್ಯೋಗವಿಲ್ಲದೆ, ತಿನ್ನಲು ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ವಿಯೆಟ್ನಾಂ ವಿಶಿಷ್ಟ ಮಾರ್ಗವೊಂದನ್ನು ಕಂಡುಕೊಂಡಿದೆ.

ಅಲ್ಲಿನ ಉದ್ಯಮಿ ಹೊವಾಂಗ್ ತುವಾನ್ ಎನ್ನುವವರು ಹನೋಯಿ, ಹ್ಯೂ ಮತ್ತು ದನಂಗ್​ಗಳಂತಹ ಪಟ್ಟಣಗಳಲ್ಲಿ ಅಕ್ಕಿಯನ್ನು ವಿತರಿಸುವ ಎಟಿಎಂಗಳನ್ನು ಸ್ಥಾಪಿಸಿದ್ದಾರೆ. 24 ಗಂಟೆಗಳೂ ಕಾರ್ಯನಿರ್ವಹಿಸುವ ಈ ಯಂತ್ರಗಳಿಂದ ಯಾರು ಬೇಕಾದರೂ ಉಚಿತವಾಗಿ ಅಕ್ಕಿಯನ್ನು ಪಡೆಯಬಹುದು.

ಇದರಿಂದ ಒಂದು ಬಾರಿ ಅರ್ಧ ಕೆ.ಜಿ. ಅಕ್ಕಿ ಹೊರಬರುತ್ತದೆ. ಲಾಕ್​ಡೌನ್ ಸಮಯದಲ್ಲಿ ಅಗತ್ಯವುಳ್ಳವರಿಗೆ ನೆರವಾಗಲು ಈ ಯಂತ್ರಗಳು ಸಹಕಾರಿಯಾಗಿದ್ದು, ತುಂಬ ಪರಿಣಾಮಕಾರಿ ಎಂದೂ ಸಾಬೀತಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net