

ಬೆಂಗಳೂರು: ಇಂದು ಸಚಿವ ಸಂಪುಟ ಸಭೆಯ ನಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ ಎಲ್ಲವನ್ನೂ ಈ ವರ್ಷವೇ ಜಾರಿ ಮಾಡುವುದಾಗಿ ಹೇಳಿದ್ದಾರೆ. ಇದೀಗ ಯುವ ನಿಧಿ ಅಡಿಯಲ್ಲಿ 24 ತಿಂಗಳ ತನಕ ಪದವೀಧರರಿಗೆ ಹಾಗೂ ಡಿಪ್ಲೊಮಾ ಮಾಸಿಕ ಮಾಸಿಕ ಭತ್ಯೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ.
ಇಂದು ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ "ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ನಾವು ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಗ್ಯಾರಂಟಿ ಕಾರ್ಡ್ಗಳಿಗೆ ನಾನು ಮತ್ತು ಡಿಕೆ ಶಿವಕುಮಾರ್ ಸಹಿ ಮಾಡಿದ್ದೆವು. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಭರವಸೆ ನೀಡಿದ್ದೆವು.
ಯುವ ನಿಧಿ- 2023-24ರಲ್ಲಿ ತೇರ್ಗಡೆಯಾದವರಿಗೆ 24 ತಿಂಗಳ ತನಕ ಮಾಸಿಕ 3,000 ರೂ., ಡಿಪ್ಲೊಮಾ 1,500 ರೂ ಮಾಸಿಕ ಭತ್ಯೆ. ಇದೇ ಅವಧಿಯಲ್ಲಿ ಯಾರಿಗಾದರೂ ಸರ್ಕಾರಿ ಅಥವಾ ಖಾಸಗಿ ನೌಕರಿ ಸಿಕ್ಕರೆ ಭತ್ಯೆ ಸಿಗುವುದಿಲ್ಲ" ಎಂದು ಘೋಷಿಸಿದ್ದಾರೆ.