ಹೀಗೆ ಮಾಡಿದರೆ ನಿಮಗೆ ಫ್ರೀ ಐಸ್​ ಕ್ರೀಂ! ಮಾಲ್​ನಲ್ಲಿದೆ ಒಂದು ಹೊಸ ಆಫರ್​

ice cream
Published on

ಮಾಸ್ಕೋ: ಮಾಲ್​ಗಳಲ್ಲಿ, ಶಾಪಿಂಗ್​ ಸೆಂಟರ್​ಗಳಲ್ಲಿ ಆಗಾಗ ವಿಶೇಷ ಆಫರ್​ಗಳನ್ನು ಹಾಕುವುದನ್ನು ನೋಡಿರುತ್ತೀರಿ. ಆದರೆ ಇದೀಗ ಬಂದಿರುವ ಆಫರ್​ ಮಾತ್ರ ಇನ್ನೂ ವಿಶೇಷ. ಏನೂ ತೆಗೆದುಕೊಳ್ಳದಿದ್ದರೂ, ಒಂದೇ ಒಂದು ರೂಪಾಯಿ ಖರ್ಚು ಮಾಡದಿದ್ದರೂ ನಿಮಗೆ ಫ್ರೀ ಐಸ್​ ಕ್ರೀಂ ಸಿಗುತ್ತದೆ. ಏನದು ಆಫರ್​? ಏನು ಮಾಡಿದರೆ ಸಿಗುತ್ತದೆ ಎನ್ನುವುದಕ್ಕೆ ಮುಂದೆ ಓದಿ.

ಕರೊನಾ ವೈರಸ್​ಗೆ ಹಲವು ಲಸಿಕೆಗಳು ಈಗಾಗಲೇ ಹೊರಬಂದಿವೆ. ಆದರೆ ಜನರು ಮಾತ್ರ ಲಸಿಕೆ ಬಗ್ಗೆ ಭಯವನ್ನು ಬಿಡುತ್ತಿಲ್ಲ. ರಷ್ಯಾದಲ್ಲಿ ಸ್ಫುಟ್ನಿಕ್​ ವಿ ಲಸಿಕೆ ನೀಡಲಾಗುತ್ತಿದ್ದು, ಅದರ ಬಗ್ಗೆಯಂತೂ ಇನ್ನೂ ಹೆಚ್ಚಿನ ಭಯವೇ ಜನರಲ್ಲಿದೆ. ಆ ಕಾರಣದಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲವಂತೆ. ಅದಕ್ಕಾಗಿ ಇದೀಗ ಹೊಸ ಆಫರ್​ನ್ನು ಹೊರತರಲಾಗಿದೆ.

ರಷ್ಯಾ ರಾಜಧಾನಿ ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿರುವ ಮಾಲ್​ ಒಂದರಲ್ಲಿ ಲಸಿಕೆ ವಿತರಣೆ ನಡೆಸಲಾಗುತ್ತಿದೆ. ಪ್ರತಿ ದಿನ 300 ಜನರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಜನರು ಸ್ವಇಚ್ಛೆಯಿಂದ ಲಸಿಕೆ ಪಡೆಯುವಂತಾಗಬೇಕು ಎನ್ನುವ ಕಾರಣದಿಂದ ಮಾಲ್​ ಒಂದು ಆಫರ್​ ನೀಡುತ್ತಿದೆ. ಲಸಿಕೆ ಹಾಕಿಸಿಕೊಂಡು ಬನ್ನಿ, ಉಚಿತವಾಗಿ ಐಸ್​ಕ್ರೀಂ ಸವಿಯಿರಿ ಎಂದು ಆಫರ್ ನೀಡಿದೆ. ಇದನ್ನು ಕಂಡ ಜನರು ಲಸಿಕೆ ಹಾಕಿಸಿಕೊಂಡು ಐಸ್​ಕ್ರೀಂಗಾಗಿ ಮುಂದೆ ಬಂದಿದ್ದಾರಂತೆ ಕೂಡ. ಭಾನುವಾರಂದು 35 ಜನಕ್ಕೂ ಹೆಚ್ಚು ಜನರು ಸರದಿ ಸಾಲಿನಲ್ಲಿ ನಿಂತು ಉಚಿತ ಐಸ್​ ಕ್ರೀಂ ಸವಿದಿದ್ದಾರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net