

ಶಿವಮೊಗ್ಗ: ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಿಷನ್ ಸ್ಟೈಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಶನ್ ಸಹಭಾಗಿತ್ವದಲ್ಲಿ ಯುವಜನ ಮತ್ತು ಮಕ್ಕಳಿಗೆ ಉಚಿತ ಸಮಗ್ರ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಜೂ.21ರಿಂದ 24ರವರೆಗೆ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಡೀನ್ ಡಾ. ಜಿ.ವಿನಾಯಕ ಹೇಳಿದರು.
ಮಿಷನ್ ಸ್ಟೈಲ್ ಸಹಭಾಗಿತ್ವದಲ್ಲಿ 2014ರಲ್ಲಿ ಕೇರಳದಿಂದ ಆರಂಭವಾಗಿ 13 ರಾಜ್ಯಗಳ ವ್ಯಾಪ್ತಿಗೆ ವಿಸ್ತರಿಸಿದೆ. ಇದುವರೆಗೆ ದೇಶಾದ್ಯಂತ 3,301 ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕರ್ನಾಟಕದ 416 ಮಕ್ಕಳು ಮತ್ತು ಯುವಕರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶಾದ್ಯಂತ ಒಟ್ಟಾರೆ 49,500ಕ್ಕೂ ಉಚಿತ ಸೀಳು ಶಸ್ತ್ರಚಿಕಿತ್ಸೆ ಮತ್ತು 73 ಸಾವಿರಕ್ಕೂ ಅಧಿಕ ವೈದ್ಯಕೀಯ ಮೌಲ್ಯಮಾಪನ ನಡೆಸಲಾಗಿದೆ. ಕರ್ನಾಟಕದಲ್ಲಿ ಮಿಷನ್ ಸ್ಟೈಲ್ ಮೂಲಕ 600ಕ್ಕೂ ರೋಗಿಗಳು ಉಚಿತ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದರು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9073397002 ಸಂಪರ್ಕಿಸಬಹುದು ಎಂದರು. ಮಿಷನ್ ಸ್ಟೈಲ್‌ನ ರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥ ರಫಿಯುರ್ ರಹಮಾನ್, ಪ್ರಮುಖರಾದ ವಿನಾಯಕ ಹೆಬ್ಬಾರ್, ಡಾ. ಕಮಲ್ ಪಾಂಡ್ಯನ್, ಡಾ. ಬಿ.ಎನ್.ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.