ನಿವೃತ್ತ ಸರ್ಕಾರಿ ನೌಕರರೇ ಹುಷಾರು.. ಇದು 'ಲೈಫ್' ಪ್ರಶ್ನೆ: ವಂಚನಾ ಜಾಲದ ಬಗ್ಗೆ ಎಚ್ಚರಿಕೆ..

Pension
Published on

ಬೆಂಗಳೂರು: ಇದೀಗ ಸೈಬರ್​ಕ್ರೈಮ್ ಎಲ್ಲೆಡೆ ಆವರಿಸಿಕೊಂಡಿದ್ದು, ಯಾರನ್ನೂ ಬಿಟ್ಟಿಲ್ಲ ಎಂಬಂತಾಗಿದೆ. ಅದರಲ್ಲೂ ಈಗ ನಿವೃತ್ತ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ವಂಚಿಸುವ ಜಾಲವೊಂದು ಪತ್ತೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವೇ ಎಚ್ಚರಿಕೆಯನ್ನೂ ನೀಡಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯುತ್ತಿರಲು ಸಂಬಂಧಿತ ಬ್ಯಾಂಕ್​ ಶಾಖೆಗೆ ವರ್ಷಕ್ಕೊಮ್ಮೆ ಜೀವನ ಪ್ರಮಾಣಪತ್ರ (ಲೈಫ್​ ಸರ್ಟಿಫಿಕೆಟ್​) ಸಲ್ಲಿಸಬೇಕಾದ್ದು ಕಡ್ಡಾಯ. ಇದೀಗ ಈ ಸಂದರ್ಭವನ್ನೂ ದುರ್ಬಳಕೆ ಮಾಡಿಕೊಂಡು ಹಿರಿಯನಾಗರಿಕರನ್ನು ವಂಚಿಸಲು ಖದೀಮರು ಮುಂದಾಗಿದ್ದಾರೆ.

ಆನ್​ಲೈನ್​ನಲ್ಲಿ ಜೀವನ ಪ್ರಮಾಣಪತ್ರ ನೀಡಲಾಗುವುದು ಎಂದು ನಕಲಿ ವೆಬ್​ಸೈಟ್​ ( http://jeevanpraman.online) ಮೂಲಕ ವಂಚಕರು ಮೋಸ ಮಾಡುತ್ತಿದ್ದಾರೆ. ಅಂದರೆ ಈ ವೆಬ್​ಸೈಟ್​ನತ್ತ ನಿವೃತ್ತ ಸರ್ಕಾರಿ ನೌಕರರನ್ನು ಸೆಳೆಯುತ್ತಿರುವ ಅವರು ನೋಂದಣಿ ಶುಲ್ಕ ಎಂದು 150 ರೂ. ಕೇಳಿ ವಂಚಿಸುತ್ತಿದ್ದಾರೆ. ಈ ಬಗ್ಗೆ ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಎಚ್ಚರಿಕೆ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಅಂಥ ಯಾವುದೇ ವೆಬ್​ಸೈಟ್ ಇಲ್ಲ ಎಂಬುವುದನ್ನು ತಿಳಿಸಿದೆ. ಅಲ್ಲದೆ ಆನ್​​ಲೈನ್​ ಜೀವನ ಪ್ರಮಾಣಪತ್ರಕ್ಕಾಗಿ https://jeevanpramaan.gov.in ಸಂಪರ್ಕಿಸುವಂತೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net