

ಆಯನೂರು: ಸುಮಾರು 3 ಕೆ.ಜಿಗೂ ಅಧಿಕ ಹಳೆಯ ಕಾಲದ ನಾಣ್ಯಗಳಿವೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂ. ಹಣ ವಂಚಿಸಲಾಗಿದೆ.
ಬೆಂಗಳೂರಿನ ಇಬ್ರಾಹಿಂ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ನಡೆದ ಹಳೇ ನಾಣ್ಯಗಳ ಪ್ರದರ್ಶನ ವೀಕ್ಷಿಸಿ ಮನೆಗೆ ವಾಪಸ್ ಹೋಗುವಾಗ ಮಟನ್ ಅಂಗಡಿ ಮಾಲೀಕ ಫೈರೋಜ್ ಎಂಬುವನ ಪರಿಚಯವಾಗುತ್ತದೆ. ಆತ ನೀವು ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವುದಾದರೆ ನನಗೆ ಶಾಹುಲ್ ಎಂಬಾತನ ಪರಿಚಯವಿದೆ. ಅವನ ಬಳಿ ಹಳೆಯ ಕಾಯಿನ್‌ಗಳಿವೆ. ಬೇಕಾದರೆ ಖರೀದಿಸಿ ಎಂದು ಶಾಹುಲ್‌ನ ನಂಬರ್ ನೀಡಿದ್ದಾನೆ.
ಶಾಹುಲ್‌ಗೆ ಇಬ್ರಾಹಿಂ ಕರೆಮಾಡಿದ್ದಾರೆ. ಆತ 3 ಕೆ.ಜಿ.ಗೂ ಅಧಿಕ ಹಳೆಯ ಕಾಲದ ಚಿನ್ನದ ನಾಣ್ಯಗಳಿವೆ. ಅರ್ಧ ದರಕ್ಕೆ ಖರೀದಿಸುತ್ತೀರಾ ಎಂದು ಕೇಳಿದ್ದಾನೆ. ನಂತರ ಬೇರೆಯದೇ ವಾಟ್ಸ್‌ಆ್ಯಪ್ ನಂಬರ್‌ನಿಂದ ನಾಣ್ಯಗಳ ೆಟೊ ಕಳುಹಿಸಿದ್ದಾನೆ. ಇಬ್ರಾಹಿಂ ಅವರನ್ನು ಸವಳಂಗಕ್ಕೆ ಬರಲು ಹೇಳಿದ ಶಾಹುಲ್ ಕೆಲವು ಚಿನ್ನದ ನಾಣ್ಯ ನೀಡಿದ್ದಾನೆ. ನಾಣ್ಯವನ್ನು ಬೆಂಗಳೂರಿಗೆ ತೆಗೆದುಕೊಂಡ ಹೋದ ಇಬ್ರಾಹಿಂ ಪರಿಶೀಲಿಸಿದಾಗ ಅಸಲಿ ಎಂದು ಖಾತ್ರಿಯಾಗಿದೆ. ಆಗ ಇಬ್ರಾಹಿಂ ಪುನಃ ಶಾಹುಲ್‌ಗೆ ಕರೆ ಮಾಡಿ 200 ಗ್ರಾಂ ಚಿನ್ನದ ನಾಣ್ಯಗಳನ್ನು 8 ಲಕ್ಷ ರೂ.ಗೆ ಖರೀದಿ ಮಾಡುವುದಾಗಿ ಹೇಳಿದ್ದು ಆಗ ರಾಹುಲ್ ಇವರನ್ನು ಶಿವಮೊಗ್ಗಕ್ಕೆ ಬರಲು ಹೇಳಿ ನಂತರ ಆಯನೂರಿಗೆ ಬರುವಂತೆ ತಿಳಿಸಿದ್ದಾನೆ.
ನ.28ರಂದು ಆಯನೂರಿಗೆ ಬಂದ ಇಬ್ರಾಹಿಂ ಅವರನ್ನು ಶಾಹುಲ್ ಆಯನೂರು-ಹಾರನಹಳ್ಳಿ ಗ್ರಾಮದ ಮಧ್ಯೆ ಇರುವ ಶುಂಠಿ ಗೋದಾಮಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನಿಂದ 5 ಲಕ್ಷ ರೂ. ಪಡೆದು 200 ಗ್ರಾಂ ನಕಲಿ ಚಿನ್ನದ ನಾಣ್ಯಗಳ ಚೀಲ ನೀಡಿದ್ದಾನೆ. ರಾಹುಲ್‌ನಿಂದ ಚೀಲ ಪಡೆದ ಇಬ್ರಾಹಿಂ ಬೆಂಗಳೂರಿಗೆ ಹೋಗಿ ಗೊತ್ತಿರುವವರ ಬಳಿ ನಾಣ್ಯಗಳನ್ನು ಪರಿಶೀಲನೆ ನಡೆಸಿದಾಗ ಅವು ನಕಲಿ ಎಂದು ತಿಳಿದುಬಂದಿದೆ. ಕೂಡಲೇ ಶಾಹುಲ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆ್ ಆಗಿದೆ. ಕುಂಸಿ ಠಾಣೆಯಲ್ಲಿ ಇಬ್ರಾಹಿಂ ದೂರು ನೀಡಿದ್ದಾರೆ.