

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಮಹಿಳೆಯರ ಸ್ನೇಹ ಬೆಳೆಸಿ ಪ್ರೀತಿಸುವ ಸೋಗಿನಲ್ಲಿ ಹಣ, ಚಿನ್ನಾಭರಣ ಪಡೆದು ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡುತ್ತಿದ್ದ ರೌಡಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ರೀತಿ 4 ವರ್ಷಗಳಿಂದ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ತುಮಕೂರಿನ ಮದ್ದೂರು ಮೂಲದ ಅಭಿಷೇಕ್ ಗೌಡ (26) ಬಂಧಿತ. ಆರೋಪಿ ವಿರುದ್ಧ ಕಳ್ಳತನ, ಜೂಜಾಟ, ಕೊಲೆ ಯತ್ನ ಪ್ರಕರಣಗಳಿವೆ. 2014ರಲ್ಲಿ ಮದ್ದೂರಿನಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದು, ಮಧುಗಿರಿ ಠಾಣೆಯ ರೌಡಿಶೀಟರ್ ಆಗಿದ್ದಾನೆ. 10.88 ಲಕ್ಷ ರೂ. ಮೌಲ್ಯದ 272 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಏನಿದು ಪ್ರಕರಣ?: ರಾಜಾಜಿನಗರದ ದಂಪತಿ ಪುತ್ರಿ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯ ಪ್ರಾಜೆಕ್ಟ್ ವರ್ಕ್‌ಗೆ ಅನುಕೂಲವಾಗಲೆಂದು ೆನ್ ಕೊಡಿಸಿದ್ದರು. ಆಕೆ ೇಸ್‌ಬುಕ್ ಬಳಸುತ್ತಿದ್ದಳು. ಇದರ ಮೂಲಕ ಸ್ನೇಹ ಬೆಳೆಸಿದ್ದ ಆರೋಪಿ, 2019ರ ನವೆಂಬರ್‌ನಿಂದ ಪ್ರೀತಿಸುವುದಾಗಿ ಬಲೆಗೆ ಬೀಳಿಸಿಕೊಂಡಿದ್ದ. ಬಳಿಕ ಪಾರ್ಕ್, ಹೋಟೆಲ್, ಸಿನಿಮಾ ಎಂದೆಲ್ಲ ಸುತ್ತಾಡಿಸಿದ್ದ. ಈ ವೇಳೆ ತನಗೆ ಕಷ್ಟವಿದೆ ಎಂದು ಹೇಳಿ, ಆಪ್ರಾಪ್ತೆಯ ಕೊರಳಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಪಡೆದಿದ್ದ. ಇದಾದ ಬಳಿಕ ಆಕೆಯ ಪಾಲಕರು ಮನೆಯಲ್ಲಿಲ್ಲದ ವೇಳೆ ಹೋಗಿ ಅತ್ಯಾಚಾರ ಎಸಗಿದ್ದಲ್ಲದೆ 500 ಗ್ರಾಂ ಚಿನ್ನಾಭರಣ, 57 ಸಾವಿರ ರೂ. ದೋಚಿದ್ದ. ಈ ಕುರಿತು ಸಂತ್ರಸ್ತೆಯ ಪಾಲಕರು ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ, ಆರೋಪಿ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಅಸಲಿ ಕೃತ್ಯ ಬಯಲಾಗಿದೆ.
ಐಷಾರಾಮಿ ಬಿಲ್ಡಪ್!:
ಆರೋಪಿ ಜೂಜುಕೋರನಾಗಿದ್ದು, ಮಹಿಳೆಯರ ಸಹವಾಸ ಅಂಟಿಸಿಕೊಂಡಿದ್ದ. ೇಸ್‌ಬುಕ್‌ನಲ್ಲಿ ಮಹಿಳೆಯೆರನ್ನೇ ಟಾರ್ಗೆಟ್ ಮಾಡಿಕೊಂಡು ಸ್ನೇಹ ಬೆಳೆಸುತ್ತಿದ್ದ. ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸಿ ೆನ್ ನಂಬರ್ ಪಡೆದು ತಾನು ಉದ್ಯಮಿ ಎಂದು ಬಿಂಬಿಸಿಕೊಂಡಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಈ ವೇಳೆ ‘ತನ್ನ ವ್ಯವಹಾರದಲ್ಲಿ ನಷ್ಟವಾಗಿದೆ. ನಿವೇಶನ ಮಾರಾಟ ಮಾಡುವವರೆಗೂ ದಿನನಿತ್ಯದ ಖರ್ಚಿಗೆ ಹಣವಿಲ್ಲ’ ಎನ್ನುತ್ತಿದ್ದ. ಆರೋಪಿಯ ಐಷಾರಾಮಿ ಬಿಲ್ಡಪ್ ಹಾಗೂ ಬಣ್ಣದ ಮಾತುಗಳಿಗೆ ಮಾರುಹೋಗುತ್ತಿದ್ದ ಮಹಿಳೆಯರು ಚಿನ್ನಾಭರಣ ಕೊಡುತ್ತಿದ್ದರು. ಇದಾದ ನಂತರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗುತ್ತಿದ್ದ. ಈತ ೇಸ್‌ಬುಕ್‌ನಲ್ಲಿ 2,314 ಮಹಿಳೆಯರ ಸ್ನೇಹ ಬೆಳೆಸಿದ್ದಾನೆ. ಹಿಂದಿನ 4 ವರ್ಷಗಳಿಂದ ಕೃತ್ಯದಲ್ಲಿ ತೊಡಗಿದ್ದು,50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾನೆ. ಸಂತ್ರಸ್ತ ಮಹಿಳೆಯರು ದೂರು ಕೊಟ್ಟರೆ ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾನ ಕಳೆಯುವುದಾಗಿ ಬೆದರಿಕೆ: ಆರೋಪಿಯು ಮಹಿಳೆಯರ ಜತೆಗಿನ ಖಾಸಗಿ ೆಟೋಗಳನ್ನು ಚಿತ್ರಿಸಿಕೊಳ್ಳುತ್ತಿದ್ದ. ಚಿನ್ನಾಭರಣ ವಾಪಸ್ ಕೇಳುವ ಮಹಿಳೆಯರಿಗೆ ಖಾಸಗಿ ೆಟೋ ತೋರಿಸಿ ಬೆದರಿಸುತ್ತಿದ್ದ. ಪೊಲೀಸರಿಗೆ ದೂರು ಕೊಟ್ಟರೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಎಲ್ಲರಿಗೂ ಗೊತ್ತಾಗುವಂತೆ ಮಾಡುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದ. ಇದರಿಂದ ಹೆದರುತ್ತಿದ್ದ ಮಹಿಳೆಯರು ದೂರು ಕೊಡಲು ಹಿಂದೇಟು ಹಾಕುತ್ತಿದ್ದರು. ಆರೋಪಿ ಇದನ್ನೇ ಕೃತ್ಯಕ್ಕೆ ಬಂಡವಾಳ ಮಾಡಿಕೊಂಡಿದ್ದ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್, ‘‘ಸಾಮಾಜಿಕ ಜಾಲತಾಣದಲ್ಲಿ ತೊಡಗಿರುವ ಮುಗ್ಧ ಹೆಣ್ಣುಮಕ್ಕಳನ್ನು ಸೆಳೆದು ಮೋಸ ಮಾಡುವವರಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ೆನ್ ಕೊಡಿಸುವ ಮುನ್ನ ಪಾಲಕರು ಯೋಚಿಸಬೇಕು. ಅಲ್ಲದೆ, ಮಕ್ಕಳ ದೈನಂದಿನ ಚಟುವಟಿಕೆ ಮೇಲೆ ನಿಗಾವಹಿಸುವುದು ಒಳಿತು’’ ಎಂದಿದ್ದಾರೆ.