

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ನೆಲೆ ಕಳೆದುಕೊಂಡ ಅನ್ಯ ನರಿಯ ಮರಿಗಳಿಗೆ ಕೆಂಪು ಜಾತಿಯ ನರಿಯೊಂದು ಹಾಲುಣಿಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ತುಣುಕಿನ ಬಗ್ಗೆ ವಿಶ್ವದ ಕೆಲವು ರಾಷ್ಟ್ರಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದವು. ಅಲ್ಲದೆ ಜಾಲತಾಣದಲ್ಲಿ ಈ ಪೋಸ್ಟ್ಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ ಈ ವಿಡಿಯೋ ತುಣುಕು ಇತ್ತೀಚಿನದು ಅಲ್ಲ. 2014ರಲ್ಲೇ ಯೂಟೂಬ್ನಲ್ಲಿ ಅಪ್ಲೋಡ್ ಆಗಿತ್ತು ಎಂಬುದು ಪತ್ತೆಯಾಗಿದೆ.
ಡೈಲಿ ಇಂಡಿಯಾ ಟೈಮ್ಸ್ ಎಂಬ ಫೇಸ್‌ಬುಕ್ ಪುಟ ನರಿ ಸ್ತನ್ಯಪಾನ ಮಾಡಿಸುತ್ತಿರುವ ವಿಡಿಯೋ ಅನ್ನು ಅಪ್ಲೋಡ್ ಮಾಡಿದೆ. ಈ ವಿಡಿಯೋ ತುಣುಕಿನ ಅವಧಿ ಕೇವಲ 33 ಸೆಂಕೆಂಡ್ಗಳು. ಆಸ್ಟ್ರೇಲಿಯಾದ ನರಿ ಸ್ತನ್ಯಪಾನ ಮಾಡಿಸುತ್ತಿದೆ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಬೆಂಕಿಯಿಂದ ನೆಲೆ ಕಳೆದುಕೊಂಡ ನರಿ ಮರಿಗಳಿಗೆ ಕೆಂಪು ಜಾತಿಯ ನರಿ ಸ್ತನ್ಯಪಾನ ಮಾಡಿಸುತ್ತಿದೆ ಎಂಬ ವಿವರ ಇದೆ.
ಹಳೆಯ ವಿಡಿಯೋ: ಆಸ್ಟ್ರೇಲಿಯಾದಲ್ಲಿ ಬೆಂಕಿಗೆ ಅರಣ್ಯ ಆಹುತಿಯಾಗಿರುವುದಕ್ಕೂ ಹಾಗೂ ನರಿ ಹಾಲುಣಿಸುತ್ತಿರುವು ದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇಂಡಿಯಾ ಟುಡೆ
ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಪತ್ತೆ ಮಾಡಿದೆ. ವೀಡಿಯೊ ಅಂದಾಜು 6 ವರ್ಷ ಹಳೆಯದು. ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿಗೆ ಸಂಬಂಧ ಕಲ್ಪಿಸಿ ಅಪ್ಲೋಡ್ ಮಾಡಲಾಗಿದೆ ಎಂದು ಸತ್ಯವನ್ನು ಬಯಲಿಗೆ ಎಳೆದಿದೆ.
2014 ರಲ್ಲಿ ಈ ವಿಡಿಯೋ ಅನ್ನು ಯ್ಯೂಟೂಬ್ಗೆ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ನರಿ ಕೆಲವು ನರಿ ಮರಿಗಳಿಗೆ ಹಾಲುಣಿಸುತ್ತಿದೆ ಎಂದು ಫ್ರೆಂಚ್ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿಗೂ ನರಿ ಸ್ತನ್ಯಪಾನ ಮಾಡಿಸುತ್ತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪತ್ತೆ ಮಾಡಿದೆ. (ಏಜೆನ್ಸೀಸ್)