ಗಾಯಗೊಂಡ ನರಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ವಾಯುವಿಹಾರಿಗಳು

16-RNR-08
Published on

ರಾಣೆಬೆನ್ನೂರ: ಕಾರು ಅಪಘಾತದಲ್ಲಿ ಗಾಯಗೊಂಡ ನರಿಗೆ ವಾಯು ವಿಹಾರಿಗಳು ಚಿಕಿತ್ಸೆ ಕೊಡಿಸಿ ಗುಣಪಡಿಸಿ ಮಾನವೀಯತೆ ಮೆರೆದ ಘಟನೆ ನಗರದ ಹೊರವಲಯದ ಹಲಗೇರಿ ರಸ್ತೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಬೆಳಗಿನ ಜಾವ 6 ಗಂಟೆ ಸುಮಾರಿಗೆ ನಗರದ ಹಲಗೇರಿ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ನರಿಗೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ನರಿ ಕಾಲು ಮುರಿದುಕೊಂಡು ಬಿದ್ದಿತ್ತು. ಈ ಸಮಯದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಂಜುನಾಥ ಕೆಂಚರೆಡ್ಡಿ, ನಾರಾಯಣ ಅಜರೆಡ್ಡಿ, ಮಂಜು ರೊಟ್ಟಿ ಎಂಬುವರು ಕೂಡಲೇ ನರಿಯ ಸ್ಥಿತಿ ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ಜತೆ ನರಿಯನ್ನು ತೆಗೆದುಕೊಂಡು ನಗರದ ಸರ್ಕಾರಿ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಎರಡು ಗಂಟೆಗಳ ಕಾಲ ಚಿತರಿಸಿಕೊಂಡ ನರಿಯನ್ನು ನಂತರ ಮೇಡ್ಲೇರಿ ಭಾಗದ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net