ಹಲವು ವರ್ಷಗಳಿಂದ ಮುಚ್ಚಿದ ಆಸ್ಪತ್ರೆ ಕಟ್ಟಡದಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೇರಿ ನಾಲ್ವರ ಶವ ಪತ್ತೆ!

HospitalMurder
Published on

ಮುಂಬೈ: ಆಸ್ಪತ್ರೆಯ ಕಟ್ಟಡದಲ್ಲಿ ನಾಲ್ವರ ಶವ ಪತ್ತೆಯಾಗಿದ್ದು, ಮೃತರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಕಂಡಿವಾಲಿ ನಗರದಲ್ಲಿರುವ ಆಸ್ಪತ್ರೆಯ ಕಟ್ಟಡ ಇದಾಗಿದ್ದು, 15 ವರ್ಷಗಳ ಹಿಂದೆಯೇ ಈ ಆಸ್ಪತ್ರೆಯನ್ನು ಮುಚ್ಚಲಾಗಿತ್ತು. ಇತ್ತೀಚೆಗೆ ಕುಟುಂಬವೊಂದು ಈ ಕಟ್ಟಡದ ಒಂದು ಭಾಗದಲ್ಲಿ ವಾಸಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಮೃತಪಟ್ಟ ನಾಲ್ವರ ಮೃತದೇಹದ ಬಳಿ, ಡೆತ್​ನೋಟ್​ ಸಿಕ್ಕಿದ್ದು, ಆಸ್ಪತ್ರೆಯ 2ನೇ ಮಹಡಿಯಲ್ಲಿ ರಕ್ತದಿಂದ ಮಡುವಿನಲ್ಲಿರುವ ಇಬ್ಬರು ಹೆಣ್ಣುಮಕ್ಕಳ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಡೆತ್​​ನೋಟ್​ ಪೊಲೀಸರ ವಶದಲ್ಲಿದ್ದು, ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಮೃತರನ್ನು ಕಿರಣ್​​ ದಲ್ವಿ, ಆತನ ಇಬ್ಬರು ಹೆಣ್ಣು ಮಕ್ಕಳಾದ ಮುಸ್ಕಾನ್​ ಮತ್ತು ಭೂಮಿ, ಮತ್ತೋರ್ವ ಶಿವದಯಾಲ್​ ಸೆನ್​ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ತನಿಖೆ ದಾಖಲಿಸಿಕೊಂಡಿದ್ದು, ತನಿಖೆ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net