ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್​ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಾಯ

granade
Published on

ಶ್ರೀನಗರ: ಉಗ್ರರು ನಡೆಸಿರುವ ಗ್ರೆನೇಡ್​ ದಾಳಿಯಿಂದಾಗಿ ಇಬ್ಬರು ಭದ್ರತಾ ಸಿಬ್ಬಂದಿಗಳು ಮತ್ತಿಬ್ಬರು ನಾಗರಿಕರು ಗಾಯಾಳುಗಳಾಗಿರುವುದಾಗಿ ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

ಇಂದು ಮಧ್ಯಾಹ್ನದ ಹೊತ್ತಿಗೆ ಶ್ರೀನಗರದ ಲಾಲ್​ ಚೌಕ್​ನ ಬಳಿ ಉಗ್ರರು ಸಿಪಿಆರ್​ಎಫ್​ ತಂಡದ ಮೇಲೆ ಗ್ರೆನೇಡ್​ ಎಸೆದಿದ್ದಾರೆ. ಲಾಲ್​ ಚೌಕ್​ ಮಾರುಕಟ್ಟೆಯಲ್ಲಿ ಭಾನುವಾರದ ಸಂತೆಯಿದ್ದು, ಘಟನೆಯಿಂದಾಗಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು ಇದೇ ರೀತಿಯ ಗ್ರೆನೇಡ್​ ದಾಳಿ ನಡೆದಿದ್ದು, 16 ವರ್ಷದ ಬಾಲಕ ಗಾಯಗೊಂಡಿದ್ದ. ಕಳೆದ ವರ್ಷ ಅಕ್ಟೋಬರ್​ 26ರಿಂದ ನವೆಂಬರ್​ 5ರ ಕಾಲಾವಧಿಯಲ್ಲಿ ಒಟ್ಟು ಮೂರು ಗ್ರೆನೇಡ್​ ದಾಳಿ ನಡೆದಿದ್ದು, ಓರ್ವ ಮೃತಪಟ್ಟಿದ್ದು, 26 ಜನರು ಗಾಯಾಳುಗಳಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net