ಖಾಸಗಿ ಬಸ್ಸಿಗೆ ಕಾರು ಡಿಕ್ಕಿ; ನಾಲ್ವರು ಸಾವು, ಓರ್ವ ಗಂಭೀರ

Accident
Published on

ಜೈಪುರ: ಕಾರು ಮತ್ತು ಖಾಸಗಿ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಡುಂಗರ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಬಿಚ್ಚಿವಾಡದಿಂದ ಡುಂಗರ್​ಪುರದ ಕಡೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಚ್ಚಿವಾಡ ಪೊಲೀಸ್​ ಠಾಣಾಧಿಕಾರಿ ಮದನ್​ಲಾಲ್​ ಖಾತಿಕ್, ರಾಷ್ಟ್ರೀಯ 48ರಲ್ಲಿ ಘಟನೆ ನಡೆದಿದ್ದು, ಏಕಮುಖವಾಗಿ ಕಾರು ವೇಗವಾಗಿ ಬಂದು ಬಸ್​ಗೆ ಡಿಕ್ಕಿ ಹೊಡೆದಿದೆ. ಮೃತರು ಗುಜರಾತ್​ ಮೂಲದವರು ಎಂದು ತಿಳಿದು ಬಂದಿದ್ದು, ಬಸ್​ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಕಿತ್ಸೆ ಕೊಡಿಸಲಾಗುತ್ತಿದೆ.

ಮೃತರನ್ನು ಗುಜರಾತ್​ನ ಶಾಮಲಾಜಿ ಮೂಲದ ಸತೀಶ್ ಭಾಯಿ (25), ಅಂಕಿತ್ ನಿನಾಮ (25), ರವಿ (23) ಮತ್ತು ಕೌಶಿಕ್ (21) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಶವಗಾರದಲ್ಲಿ ಇರಿಸಲಾಗಿದ್ದು, ಮೃತರ ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಬಿಚ್ಚಿವಾಡ ಪೊಲೀಸ್​ ಠಾಣಾಧಿಕಾರಿ ಮದನ್​ಲಾಲ್​ ಖಾತಿಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net