ಛಾವಣಿ ಕಾಂಕ್ರೀಟ್ ಕುಸಿದು ನಾಲ್ವರಿಗೆ ಗಾಯ

klr anganavadi
೨. ಬಂಗಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.
Published on

ಕೋಲಾರ/ಬಂಗಾರಪೇಟೆ

ತಾಲೂಕಿನ ದಾಸರಹೊಸಹಳ್ಳಿಯಲ್ಲಿ ಶಿಥಿಲಗೊಂಡಿದ್ದ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕಾಂಕ್ರೀಟ್ ಕುಸಿದು ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಿಖಿತಾ (4), ಜಾಹ್ನವಿ (4), ಲಾಸ್ಯಾ (4), ಪರಿಣಿತಾ (4) ಗಾಯಗೊಂಡಿದ್ದು, ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿ 13 ಮಕ್ಕಳು ದಾಖಲಾಗಿದ್ದು, 30 ವರ್ಷಗಳಿಂದ ಮಂಜುಳಾ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರದ ಕಟ್ಟಡ ಶಿಥಿಲಗೊಂಡು ಛಾವಣಿ ಬಿರುಕುಬಿಟ್ಟಿತ್ತು. ಆದರೆ ಇದನ್ನು ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಿರಲಿಲ್ಲ. ಶನಿವಾರ ಬೆಳಗ್ಗೆ ನಾಲ್ವರು ಚಿಣ್ಣರು ಕೇಂದ್ರದಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದ ಹಾಗೆ ಛಾವಣಿಯ ಕಾಂಕ್ರೀಟ್ ಕುಸಿದು ಬಿದ್ದು ನಾಲ್ವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.

ಸ್ಥಳೀಯರ ನೆರವಿನೊಂದಿಗೆ ತಕ್ಷಣ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳನ್ನು ದಾಖಲು ಮಾಡಲಾಗಿದೆ. ಲಿಖಿತಾ ಮತ್ತು ಜಾಹ್ನವಿ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಲಾಸ್ಯಾ ಮತ್ತು ಪರಿಣಿತಾ ಕಾಲಿಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ನಾಲ್ಕೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸಿಡಿಪಿಒ ಮುನಿರಾಜು ಮಕ್ಕಳ ಯೋಗಕ್ಷೇಮ ವಿಚಾರಿಸಿ ಪಾಲಕರಿಗೆ ಧೈರ್ಯ ತುಂಬಿದರು.

ತಪ್ಪದ ಪ್ರಾಣ ಭಯ

ತಾಲೂಕಿನಲ್ಲಿ 285 ಅಂಗನವಾಡಿ ಕೇಂದ್ರಗಳಿದ್ದು, 170 ಕೇಂದ್ರಗಳು ಸ್ವಂತ ಕಟ್ಟಡಗಳಿದ್ದು, ೪೦ ಕೇಂದ್ರ ಬಾಡಿಗೆ ಕಟ್ಟಡಗಳಲ್ಲಿ, ಉಳಿದ ಎಲ್ಲ ಕೇಂದ್ರಗಳನ್ನು ವಿವಿಧ ಸರ್ಕಾರಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಆದರೆ, ಬಹಳಷ್ಟು ಕಡೆ ಕಟ್ಟಡಗಳು ಶಿಥಿಲಗೊಂಡು ಆಗಾಗ ಮಕ್ಕಳ ಮೇಲೆ ಸಣ್ಣ ಗಾತ್ರದ ಛಾವಣಿಯ ಕಾಂಕ್ರೀಟ್ ಬೀಳುವುದು ಸಾಮಾನ್ಯವಾಗಿದೆ. ಪರಿಸ್ಥಿತಿ ಹೀಗಿದ್ದರೂ ಮಕ್ಕಳು ಪ್ರಾಣ ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಎಚ್ಚರಿಸಿದ್ದ ವಿಜಯವಾಣಿ

ಬಂಗಾರಪೇಟೆ ತಾಲೂಕಿನ ವಿವಿಧೆಡೆ ಅಂಗನವಾಡಿ ಕೇಂದ್ರಗಳ ದುಸ್ಥಿತಿ ಕುರಿತು ಹಲವು ಬಾರಿ ವಿಜಯವಾಣಿಯಲ್ಲಿ ವರದಿ ಪ್ರಕಟಿಸಿದರೂ ಅಧಿಕಾರಿಗಳು ಮಾತ್ರ ತಮಗೂ ಅದಕ್ಕೂ ಸಂಬAಧವೇ ಇಲ್ಲ ಎನ್ನುವ ರೀತಿ ಕಣ್ಮುಚ್ಚಿ ಕುಳಿತಿದ್ದಾರೆ. ಮೇಲ್ನೊಟಕ್ಕೆ ಅಽಕಾರಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಪುಟ್ಟ ಕಂದಮ್ಮಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದಾಸರಹೊಸಹಳ್ಳಿ ಗ್ರಾಮಸ್ಥರು ದೂರಿದ್ದಾರೆ.

ಕೋಟ್...

ಕ್ರಾಂಕ್ರೀಟ್ ಕುಸಿದು ಇಬ್ಬರು ಮಕ್ಕಳಿಗೆ ತೊಡೆ ಭಾಗದ ಮೂಳೆಗೆ ಏಟಾಗಿದ್ದು, ಶಸö ಚಿಕಿತ್ಸೆ ಮಾಡಲಾಗಿದೆ. ಮಕ್ಕಳು ಸಂಪೂರ್ಣ ಗುಣಮುಖರಾಗುವವರೆಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಆರೈಕೆ ಮಾಡಲಾಗುತ್ತದೆ. ಜತೆಗೆ ಸಿಡಿಪಿಒ ಅವರಿಂದ ಶಿಥಿಲಗೊಂಡ ಕಟ್ಟಡಗಳ ಮಾಹಿತಿ ಕೇಳಿದ್ದು, ವಿಶೇಷ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಽಕಾರಿಗಳಿಗೆ ಸೂಚಿಸಲಾಗಿದೆ.

| ಎಸ್.ಎನ್.ನಾರಾಯಣಸ್ವಾಮಿ, ಶಾಸಕ

ಕೋಟ್....

ಅಂಗನವಾಡಿ ಕೇಂದ್ರದ ಛಾವಣಿಯ ಕಾಂಕ್ರೀಟ್ ಬಿದ್ದು ನಾಲ್ಕು ಮಕ್ಕಳಿಗೆ ಗಾಯಗಳಾಗಿದ್ದು, ಕಾಯಕರ್ತೆಯರು ಕಟ್ಟಡದ ಸಮಸ್ಯೆ ಕುರಿತು ಗಮನಕ್ಕೆ ತರಬೇಕಿತ್ತು. ತಿಂಗಳಿಗೆ ಎರಡು ಬಾರಿ ನಡೆಯುವ ಸಭೆಯಲ್ಲಿಯೂ ಈ ಸಮಸ್ಯೆ ಕುರಿತು ಹೇಳಲಿಲ್ಲ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯ ಕರ್ತವ್ಯ ಲೋಪ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು.

| ಮುನಿರಾಜು, ಸಿಡಿಪಿಒ ಬಂಗಾರಪೇಟೆ

ಬಾಕ್ಸ್...

ನನ್ನ ಟೈಂ ಸರಿಯಿಲ್ಲ, ನಡೆಯಬಾರದ ಘಟನೆ ನಡೆದು ಹೋಗಿದೆ. 40 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಘಟನೆ ಕುರಿತು ಪಾಲಕರಿಗೆ ಕ್ಷಮೆ ಕೇಳುತ್ತೇನೆ.

| ಮಂಜುಳಾ, ಅಂಗನವಾಡಿ ಕಾರ್ಯಕರ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net