

ಬೆಂಗಳೂರು: ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ ವಿದೇಶಿ ಮೂಲದ ೪ ನಾಲ್ವರು ಸೇರಿ ಒಟ್ಟು ೭ ಮಂದಿ ಡ್ರಗ್ ಪೆಡ್ಲರ್‌ಗಳನ್ನು ಸಿಸಿಬಿಯ ಮಾದಕ ವಸ್ತು ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ.
ದಾನ್ ಪ್ರಾಂಕ್, ಬ್ರೋ ಪ್ರಾನಿಸ್ ಕೋನನ್, ಇಜಿಕೆ, ಇಕೆಸ್ ಚುಕೋಸ್, ಕೆ.ಗೌತಮ್, ಅಭಿಷೇಕ್ ಎನ್ ಜಾಧವ್ ಮತ್ತು ರಿತಿಕ್ ರಾಜ್ ಬಂಧಿತರು.
ನಗರದ ಜ್ಞಾನಭಾರತಿ, ಬಾಣಸವಾಡಿ, ಹುಳಿಮಾವು, ಪುಲಿಕೇಶಿನಗರ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳು ಸೇರಿ ೭ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ೨೧೯ ಎಕ್ಸ್‌ಟೆಸಿ ಮಾತ್ರೆ, ೫೦೫ ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, ೧೩೦ ಗ್ರಾಂ ಚರಸ್, ೧೦೦.೮೮ ಗ್ರಾಂ ಕೊಕೇನ್, ೧ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.