ಸಕ್ರೆಬೈಲ್‌ನ ನಾಲ್ಕು ಆನೆಗಳಿಗೆ ಅನಾರೋಗ್ಯ !

Sakrebail elephant
ಸಕ್ರೆಬೈಲ್‌ನ ಆನೆ ಬಾಲಣ್ಣನ ಕಿವಿ ಬಳಿ ಗಾಯವಾಗಿರುವುದು.
Published on

ಶಿವಮೊಗ್ಗ: ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ ಕುಮ್ಕಿ ಆನೆ ಬಾಲಣ್ಣ ಸೇರಿ ಸಕ್ರೆಬೈಲು ಬಿಡರಾದ ನಾಲ್ಕು ಆನೆಗಳು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿವೆ.

ಬಾಲಣ್ಣನ ಕಿವಿಯ ಭಾಗದಲ್ಲಿ ಗಾಯವಾಗಿ ಹುಳುಗಳ ಬೀಳುತ್ತಿವೆ. ಸಾಗರ ಆನೆಗೆ ಹೊಟ್ಟೆಯಲ್ಲಿ ಗಾಯವಾಗಿದೆ. ವಿಕ್ರಾಂತ್ ಆನೆಯ ಕಾಲಿಗೆ, ಆಡ್ಕ ಬಡ್ಕಾ ಎನ್ನುವ ಕುಂದಾಪುರದ ಹಾಲಾಡಿ ಹತ್ತಿರ ಸೆರೆಹಿಡಿದಿದ್ದ ಆನೆ ಕೂಡ ಗಾಯಗೊಂಡಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ, ಬಾಲಣ್ಣನ ಕಿವಿಗೆ ಗಾಯವಾಗಿರುವುದು ನಿಜ. ಈಗಾಗಲೇ ಬನ್ನೇರುಘಟ್ಟದಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಹಿಂದೆ ಬಾಲಣ್ಣನ ಕಿವಿಗೆ ಇಂಜಕ್ಷನ್ ನೀಡುವಾಗ ಮುಳ್ಳು ಸ್ವಲ್ಪ ಹೆಚ್ಚು ಕಡಿಮೆಯಾಗಿ ರಿಯಾಕ್ಷನ್ ಆಗಿತ್ತು. ಆದ್ದರಿಂದ ಗಾಯವಾಗಿತ್ತು. ಈಗ ಕ್ರಮೇಣ ಗಾಯದಿಂದ ಚೇತರಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಸಾಗರ್‌ನಿಗೆ ಈ ಹಿಂದೆ ಹೊಟ್ಟೆಯಲ್ಲಿ ಸಣ್ಣದೊಂದು ಗಾಯವಾಗಿತ್ತು. ಆ ಕಾರಣಕ್ಕೆ ಅಂದೇ ಚಿಕಿತ್ಸೆ ಕೊಡಲಾಗಿತ್ತು. ಅದು ರಿಯಾಕ್ಷನ್ ಈಗ ಗಾಯವಾಗಿ ಪಸ್(ಕೀವು) ಬರುತ್ತಿದೆ. ಅದನ್ನು ಸ್ವಚ್ಛಗೊಳಿಸಿ ಚಿಕಿತ್ಸೆ ನೀಡಲಾಗಿದೆ. ಉಳಿದಂತೆ ಇನ್ನೇರೆಡು ಆನೆಗಳಿಗೆ ಕಾಡಾನೆಗಳಿಂದ ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net