ಮ.ಬೆಟ್ಟದಲ್ಲಿ ನಾಲ್ಕು ಬೈಕ್ ಬೆಂಕಿಗಾಹುತಿ

23 HANUR 5
ಮಲೆಮಹದೇಶ್ವರ ಬೆಟ್ಟದಲ್ಲಿ ಬೆಂಕಿಗೆ ಬೈಕ್‌ಗಳು ಸುಟ್ಟು ಹೋಗಿರುವುದು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು 4 ಬೈಕ್‌ಗಳು ಸುಟ್ಟು ಹೋಗಿವೆ.

ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದ ಬಸವಣ್ಣ ಅವರು ಹೊಸದಾಗಿ ಖರೀದಿಸಿದ್ದ ಬೈಕ್‌ನೊಂದಿಗೆ ಶನಿವಾರ ಮ.ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಕಾರಯ್ಯ, ಬಿಲ್ಲಯ್ಯ ವಸತಿ ಗೃಹದ ಬಳಿ ನಿಲ್ಲಿಸಿದ್ದರು. ಸೋಮವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇವರ ಬೈಕ್ ಸೇರಿದಂತೆ ಸಮೀಪದಲ್ಲಿದ್ದ 4 ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂಬಂಧ ಬಸವಣ್ಣ ಅವರು ಮ.ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net