ಕೋಟ್ಯಾಧಿಪತಿಯಾಗುವ ಆಸೆ..ವ್ಯಕ್ತಿಯನ್ನು ಕೊಂದು ತಲೆ ಬುರುಡೆ ಇಟ್ಟು ಮಾಟ ಮಂತ್ರದ ಪೂಜೆ; ನಾಲ್ವರು ಅರೆಸ್ಟ್​​ | Black magic

black magic (1)
Published on

ಘಾಜಿಯಾಬಾದ್​: ವ್ಯಕ್ತಿಯನ್ನು ಕೊಂದು ಅತನ ತಲೆಬುರುಡೆಯನ್ನು ಮಾಟಮಾಂತ್ರಕ್ಕಾಗಿ(Black magic) ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಾಜಿಯಬಾದ್​ ಪೊಲೀಸರು ನಾಲ್ವರನ್ನು ಭಾನುವಾರ ಬಂಧಿಸಿದ್ದಾರೆ.

ಬಿಹಾರ ಮೂಲದ ಆರೋಪಿಗಳಾದ ವಿಕಾಸ್​ ಅಲಿಯಾಸ್​ ಪರಮಾತ್ಮ, ನರೇಂದ್ರ, ಪವನ್​ ಕುಮಾರ್ ಮತ್ತು ಪಂಕಜ್​ ಎಂಬುವವರನ್ನು ಸೆರೆ ಹಿಡಿದಿದ್ದು, ಬಂಧಿತರಿಂದ ಒಂದು ತಲೆ ಬುರುಡೆ, ಕೃತ್ಯಕ್ಕೆ ಬಳಸಿದ ಹರಿತವಾದ ಆಯುಧಗಳು ಮತ್ತು ಮೊಬೈಲ್​ ಪೋನ್​ ವಶಪಡಿಸಿಕೊಂಡಿದ್ದಾರೆ. ಬಿಹಾರದ ರಾಜು ಶಾ (ರಾಜಕುಮಾರ್)​ ಎಂಬ ವ್ಯಕ್ತಿಯನ್ನು ಕೊಂದು ಇತನ ತಲೆ ಬುರುಡೆ ಬಳಸಿಕೊಳ್ಳಲಾಗಿದೆ.

ನಾವು ಯುಟ್ಯೂಬ್​ನಲ್ಲಿ ಮಾಟ ಮಂತ್ರಗಳನ್ನು ಕಲಿತ್ತಿದ್ದೇವೆ. ತಲೆ ಬುರುಡೆ ಪೂಜೆ ಮಾಡುವುದರಿಂದ 50 ರಿಂದ 60 ಕೋಟಿ ರೂ.ಗಳು ಗಳಿಸಬಹದು ಎಂದು ಇಬ್ಬರು ಯೂಟ್ಯೂಬ್​ ಮಾಂತ್ರಿಕರ ಸೂಚನೆ ನಂಬಿದ ಇಬ್ಬರು ವ್ಯಕ್ತಿಯೊರ್ವನನ್ನು ಕೊಂದ ತಲೆಬುರುಡೆಯನ್ನು ತಂದು ಪೂಜೆ ಮಾಡಿದ್ದರು.

ಪ್ರಕರಣದ ಹಿನ್ನೆಲೆ..

2004ರ ಜೂನ್​ರಲ್ಲಿ ನಡೆದ ಪ್ರಕರಣ ಇದು. ಘಜಿಯಾಬಾದ್​ ಪೊಲೀಸರು ಕಳೆದ ಕೆಲ ದಿನಗಳಿಂದೆ ರಸ್ತೆಯ ಪಕ್ಕದ ಚರಂಡಿಯಲ್ಲಿ ತಲೆ ಇಲ್ಲದ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ತನಿಖೆ ಆರಂಭಿಸಿದ್ದು, ಸಿಸಿಟಿವಿ ಪರಿಶೀಲನೆ ಬಳಿಕ ಇದೇ ಆಗಸ್ಟ್​ನಲ್ಲಿ ಇಬ್ಬರು ಆರೋಪಿಗಳಾದ ವಿಕಾಸ್​ ಗುಪ್ತ ಅಲಿಯಾಸ್ ಮೋಟಾ ಮತ್ತು ಧನಂಜಯ್​ ಎಂಬುವವನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ವಿಕಾಸ್​ ಅಲಿಯಾಸ್​ ಪರಮಾತ್ಮ ಪ್ರಕರಣದ ಮಾಸ್ಟರ್​ ಮೈಂಡ್​ ಎಂದು ತಿಳಿದು ಬಂದಿದೆ. ಇತನೆ ಈ ಕೃತ್ಯಕ್ಕೆ ತಲೆ ಬುರುಡೆ ತರುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಈ ಕಾರ್ಯಕ್ಕೆ 25 ಸಾವಿರ ರೂ. ಅಡ್ವಾನ್ಸ್​ ಕೂಡ ನೀಡಿದ್ದನು ಎಂದು ತನಿಖೆ ವೇಳೆ ಗೊತ್ತಾಗಿದೆ.

ವಿಕಾಸ್ ಪರಮಾತ್ಮ​ ಸೂಚನೆ ಮೇರೆಗೆ ರಾಜು ಶಾ ಎಂಬ ವ್ಯಕ್ತಿಯನ್ನು ಕೊಲೆ ಮಾಡುವುದಾಗಿ ಧನಂಜಯ್,​ ವಿಕಾಸ್​ ಗುಪ್ತ ಅಲಿಯಾಸ್ ಮೋಟಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಡಿ.7 ರಂದು ವಿಕಾಸ್​ ಪರಮಾತ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಬಂಧಿತ ನರೇಂದ್ರ, ಪವನ್​ ಮತ್ತು ಪಂಕಜ್​​ ಕೂಡ ಈ ಕೃತ್ಯಕ್ಕೆ ಸಹಾಯ ಮಾಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net