ಸುಜುಕಿ ಮೋಟಾರ್ಸ್​​ನ ಮಾಜಿ ಅಧ್ಯಕ್ಷ Osamu Suzuki ನಿಧನ

Osamu Suzuki
Published on

ನವದೆಹಲಿ: ಸುಜುಕಿ ಮೋಟಾರ್​​ ಕಾರ್ಪೋರೇಷನ್​ನ ಮಾಜಿ ಅಧ್ಯಕ್ಷ ಒಸಾಮು ಸುಜುಕಿ (Osamu Suzuki) ಡಿಸೆಂಬರ್​ 25ರಂದು ನಿಧನರಾಗಿರುವುದಾಗಿ ಕಂಪನಿ ಘೋಷಿಸಿದೆ. ಮೃತರಿಗೆ 94 ವರ್ಷ ವಯಸ್ಸಾಗಿತ್ತು.

ಮಾರುತಿ–ಸುಜುಕಿ ಮೂಲಕ ಭಾರತದಲ್ಲಿ ಹೊಸ ಕ್ರಾಂತಿಗೆ ಕಾರಣರಾಗಿದ್ದ ಒಸಾಮು ಸುಜುಕಿ (Osamu Suzuki) ಅವರು ಕೆಲ ಕಾಲದಿಂದ ಲಿಂಫೋಮಾದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

1930ರ ಜನವರಿ 30 ರಂದು ಜಪಾನಿನ ಗೆರೋದಲ್ಲಿ ಜನಿಸಿದ ಅವರು 1958ರಲ್ಲಿ ಸುಜುಕಿ ಮನೆತನದ ಹುಡುಗಿಯನ್ನು ಮದುವೆಯಾಗುವ ಮೂಲಕ ತಮ್ಮ ಹೆಸರಿನ ಮುಂಭಾಗ ಪತ್ನಿ ಮನೆತನದ ಹೆಸರನ್ನು ಸೇರಿಸಿಕೊಂಡಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಒಸಾಮು, ನಂತರ ಪತ್ನಿಯ ಅಜ್ಜ ಸ್ಥಾಪಿಸಿದ್ದ ಕಂಪನಿಯಲ್ಲಿ ಕೆಲಸ ಆರಂಭಿಸಿದರು. 1958ರಲ್ಲಿ ಕಂಪನಿ ಸೇರಿದರೂ, ಕೇವಲ ಎರಡೇ ದಶಕದಲ್ಲಿ ಉನ್ನತ ಹುದ್ದೆಗೇರಿದರು.

ಸುಮಾರು 40 ವರ್ಷಗಳ ಕಾಲ ಅವರು ಕಂಪನಿಯನ್ನು ಮುನ್ನಡೆಸಿರುವ ಅವರು, ಈ ಅವಧಿಯಲ್ಲಿ ಎರಡು ಬಾರಿ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಭಾರತ, ಯೂರೋಪ್​, ಅಮೆರಿಕ ಸೇರಿದಂತೆ ಅನೇಕ ಕಡೆ ಕಂಪನಿಯ ಜಾಲವನ್ನು ವಿಸ್ತರಿಸಿದ್ಧಾರೆ. ಒಸಾಮು ಸುಜುಕಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಜಾಗತಿಕ ಮಟ್ಟದ ನಾಯಕರು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net